ಸುಳ್ಯ:ಸುಳ್ಯದ ಶ್ರೀ ಶಾರದಾಂಬಾ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ, ಶ್ರೀ ಶಾರದಾಂಬಾ ಸೇವಾ ಟ್ರಸ್ಟ್, ಶಾರದಾಂಬಾ ಮಹಿಳಾ ಸಮಿತಿ ಒಳಗೊಂಡ ಶ್ರೀ ಶಾರದಾಂಬಾ, ದಸರಾ ಸಮೂಹ ಸಮಿತಿಗಳ ನೇತೃತ್ವದಲ್ಲಿ ಅಗಲಿದ ತೂಗುಸೇತುವೆಗಳ ಸರದಾರ ಡಾ.ಗಿರೀಶ್ ಭಾರದ್ವಾಜ್ ಅವರಿಗೆ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮ ಸುಳ್ಯ

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ, ಸಮೂಹ ಸಮಿತಿಗಳ ಪದಾಧಿಕಾರಿಗಳಾದ ಅಶೋಕ ಪ್ರಭು, ಬೂಡು ರಾಧಾಕೃಷ್ಣ ರೈ, ಸುನಿಲ್ ಕೇರ್ಪಳ, ಗೋಕುಲ್ದಾಸ್, ಭವಾನಿಶಂಕರ ಕಲ್ಮಡ್ಕ, ಬೆಳ್ಯಪ್ಪ ಗೌಡ, ಸತೀಶ್ ಎನ್.ಕೆ, ವಿಠಲ ಬಾಣೂರು, ಶುಭಕರ ಉಬರಡ್ಕ, ಸರಸ್ವತಿ, ನಮಿತ, ಸುನಂದ ಟೀಚರ್, ಬಿಂದು ಮೋಹನ್ ಮತ್ತಿತರರು ಇದ್ದರು. ಗಿರೀಶ್ ಭಾರದ್ವಾಜ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನುಡಿನಮನ ಸಲ್ಲಿಸಲಾಯಿತು.







































