ಸುಳ್ಯ:ಸುಳ್ಯ ಕಸಬಾ ಬೆಟ್ಟಂಪಾಡಿ ನಿವಾಸಿ ಚಿತ್ರಕಲಾವಿದೆ ಪೂಜಾ ಬೋರ್ಕರ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ.ಕೇವಲ 3 ನಿಮಿಷ 30 ಸೆಕೆಂಡ್ ನಲ್ಲಿ 1.4 ಸೆಂಟಿ ಮೀಟರ್ ಕಥಕಳಿ ಚಿತ್ರವನ್ನು ಕಡಲೆಕಾಳಿನಲ್ಲಿ ಬಿಡಿಸುವುದರೊಂದಿಗೆ
ದಾಖಲೆ ನಿರ್ಮಿಸಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಪಟ್ಟಿಯನ್ನು ಸೇರಿದ್ದಾರೆ. ಈಗಾಗಲೇ ಐಬಿಆರ್ ಎಚಿವರ್ ಪಟ್ಟಿಯನ್ನು ಸೇರಿರುವ ಹಾಗೂ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಈಕೆ ಬೆಟ್ಟಂಪಾಡಿ ದಿ.ರಮೇಶ್ ನಾಯಕ್ ಹಾಗೂ ಹೇಮಲತಾ ದಂಪತಿಯ ಪುತ್ರಿ, ಆನಡ್ಕ ಮನೋಜ್ ಅವರ ಪತ್ನಿ.




































