ಬೆಂಗಳೂರು:ಡಾ.ಉಮ್ಮರ್ ಬೀಜದಕಟ್ಟೆ ಅವರ ಸಜ್ಜನ ಪ್ರತಿಷ್ಠಾನದ ವತಿಯಿಂದ ನೀಡುವ ‘ಸಜ್ಜನ ಶ್ರೇಷ್ಠ ರಕ್ತದಾನಿ’ ಪ್ರಶಸ್ತಿಯನ್ನು
ಸುಳ್ಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಹಾಗು 168 ಬಾರಿ ರಕ್ತದಾನ ಮಾಡಿದ ಪಿ.ಬಿ. ಸುಧಾಕರ ರೈ ಅವರಿಗೆ ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ
ಕಾರ್ಮಿಕ ಸಹಿಂತೆಗಳು,ಪ್ರಮುಖ ನಿಬಂಧನೆಗಳು, ಉದ್ಯೋಗದಾತರ ಅನುಸರಣೆ ಮತ್ತು ದಾಖಲಾತಿ ಅವಶ್ಯಕತೆಗಳು ಎಂಬ ವಿಷಯಗಳಲ್ಲಿ ವಿವಿಧ ಕಂಪನಿಯ ಉದ್ಯೋಗಿಗಳಿಗೆ ಉಚಿತ ತರಬೇತಿ ಕಾರ್ಯಕ್ರಮ ನಡೆಯಿತು.ಬೆಂಗಳೂರಿನ ವೈಟ್ ಫೀಲ್ಡ್ ಏರಿಯಾ ವಾಣಿಜ್ಯ ಮತ್ತು ಕೈಗಾರಿಕಾ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ ನಿವೃತ್ತ ಸಹಾಯಕ ಕಾರ್ಮಿಕ ಇಲಾಖೆ ಕಮೀಷನರ್ ಗುರುದಾಸ್ ಎಂ ಭಟ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ವಹಿಸಿದ್ದರು. ಸಜ್ಜನ ಕನ್ನಡ ನಾಡು-ನುಡಿ ವಿಭಾಗದ ರಾಜ್ಯ ಸಂಚಾಲಕರಾದ ಅಡ್ವೊಕೇಟ್ ಮಂಜುನಾಥ್ ಬಿ ಹಾಗೂ ಕಾರ್ಮಿಕ ನಿಬಂಧನೆಗಳ ಮಾಹಿತಿತಜ್ಞ ಶೇಖರ್ ಗಣಗಲೂರು ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿವೃತ್ತ ಉಪನಿರ್ದೇಶಕ ಇಬ್ರಾಹಿಂ ಗೂನಡ್ಕ ಮತ್ತು ನಿವೃತ್ತ ಸಹಾಯಕ ಕಾರ್ಮಿಕ ಇಲಾಖೆ ಕಮೀಷನರ್ ಗುರುದಾಸ್ ಎಂ ಭಟ್ ಅವರನ್ನು ಸನ್ಮಾನಿಸಲಾಯಿತು.
ಸಾಸ್ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ನಿರ್ದೇಶಕ ರಾಜಶೇಖರ ರೈ, ಅಭಿನಂದನಾ ಭಾಷಣ ಮಾಡಿದರು.ಕಾರ್ಯಗಾರದಲ್ಲಿ 65ಕ್ಕೂ ಹೆಚ್ಚು ಮಂದಿ ವಿವಿಧ ಕಂಪನಿಗಳಿಂದ ಗಳಿಂದ ಭಾಗವಹಿಸಿದರು. ಉದ್ಯಮಿ ನೌಶಾದ್ ಎಡವಲತ್ತ್, ವಾಸು ಎಂ, ಸದಾಶಿವ, ಬೀಜದಕಟ್ಟೆ, ನಟರಾಜು ಬಿ, ರಹೀಂ ಬೀಜದಕಟ್ಟೆ, ಆರಿಸ್ ಪಿ ಎಂ, ರಹೀಂ ಕೊಪ್ಪದಕಜೆ ಅತಿಥಿಗಳಾಗಿ ಭಾಗವಹಿಸಿದರು.
ಶೇಖರ್ ಗಣಗಲೂರು ಕಾರ್ಯಕ್ರಮ ನಿರೂಪಿಸಿದರು, ಶರೀಫ್ ಜೆಟ್ಟಿಪಳ್ಳ ಸ್ವಾಗತಿಸಿದರು, ಶಂಶಾಕ್ ವಂದಿಸಿದರು.
ಸಜ್ಜನ ಪ್ರತಿಷ್ಠಾನ ನಿರ್ದೇಶಕರಾದ ಶರೀಫ್ ಜಟ್ಟಿಪಳ್ಳ ಮಂಜುನಾಥ್ ಹಿರಿಯೂರ್ ಮತ್ತು ಮೊಹಮ್ಮದ್ ಮಾಝಿನ್ ಕಾರ್ಯಕ್ರಮನ್ನು ಸಂಯೋಜಿಸಿದರು.






