ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್ )ಯು ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಜುಲೈ 15 ರವರೆಗೆ 17,91,980 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದ್ದು ಅದರಲ್ಲಿ
5,41,529 ಫಾರ್ಮ್ಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ನಮೂನೆ ಡಿಜಿಟೈಸ್ ಮಾಡಿದ ವಿವರ:
ಸುಳ್ಯ-79,213.ಬೆಳ್ತಂಗಡಿ-66,685, ಮೂಡಬಿದ್ರೆ-59,167, ಮಂಗಳೂರು ನಗರ ಉತ್ತರ-58,682, ಮಂಗಳೂರು ನಗರ ದಕ್ಷಿಣ-67,721, ಮಂಗಳೂರು-86,607, ಬಂಟ್ವಾಳ-63,770, ಪುತ್ತೂರು-59,684,
ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಗಡುವನ್ನು ಆಗಸ್ಟ್ 8, 2026 ರವರೆಗೆ ವಿಸ್ತರಿಸಿದೆ. ಬಿಎಲ್ಒ ಮೂಲಕ ನಡೆಯುವ ಮನೆಮನೆ ಭೇಟಿ ಮತ್ತು ಗಣತಿ ನಮೂನೆಗಳ ವಿತರಣೆಯನ್ನು ಈ ಅವಧಿಯವರೆಗೆ ವಿಸ್ತರಿಸಲಾಗಿದೆ.ಪರಿಷ್ಕೃತ ವೇಳಾಪಟ್ಟಿಯಂತೆ ಮನೆಮನೆ ಭೇಟಿ ಮತ್ತು ನಮೂನೆ ವಿತರಣೆ: ಆಗಸ್ಟ್ 8, 2026ರವರೆಗೆ ಮುಂದುವರಿಯಲಿದೆ.ಕರಡು ಮತದಾರರ ಪಟ್ಟಿ ಪ್ರಕಟಣೆ:ಆಗಸ್ಟ್ 17, 2026.ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ: ಆಗಸ್ಟ್ 17 ರಿಂದ ಸೆಪ್ಟೆಂಬರ್ 16, 2026 ರವರೆಗೆ.ಅಂತಿಮ ಮತದಾರರ ಪಟ್ಟಿ ಪ್ರಕಟಣೆ: ಅಕ್ಟೋಬರ್ 19, 2026.








