ಸುಳ್ಯ: ಇಂದು ಸುಳ್ಯಕ್ಕೆ ಆಗಮಿಸಿದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಬ್ಯಾಡಗಿ ಶಾಸಕರಾದ ಬಸವರಾಜ ನೀಲಪ್ಪ ಶಿವಣ್ಣನವರ್ ಅವರನ್ನು ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ವಾಗತಿಸಿ, ಸನ್ಮಾನಿಸಲಾಯಿತು ಶಾಲು, ಹಾರ ಹಾಗೂ
ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮಹೇಶ್.ಬಿ ಶಿರೂರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ನ.ಪಂ ಸದಸ್ಯರಾದ ರಿಯಾಝ್ ಕಟ್ಟೆಕ್ಕಾರ್, ನ.ಪಂ ಸದಸ್ಯ ಶರೀಫ್ ಕಂಠಿ, ಸಲೀಂ ಪೆರುಂಗೋಡಿ ಕುಮಾರ್ ನಾಗಪಟ್ಟಣ ಉಪಸ್ತಿತರಿದ್ದರು.