ಕೇರ್ಪಡ:ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ಜ.1ರಿಂದ 7ರ ತನಕ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಪ್ರತಿ ದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯ ಬ್ರಹ್ಮಕಲಶೋತ್ಸವ ನಡೆಯಲಿದೆ.
ಜ.1ರಂದು ಬೆಳಿಗ್ಗೆ ಗಂಟೆ 9.30ಕ್ಕೆ : ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಊರ ಹಾಗೂ ಪರಊರ ಭಕ್ತಾಭಿಮಾನಿಗಳಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ.ಸಂಜೆ 5.30ಕ್ಕೆ ಕ್ಷೇತ್ರದ
ತಂತ್ರಿಗಳಿಗೆ ಹಾಗೂ ಇತರ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ. ರಾತ್ರಿ ಗಂಟೆ 7.00ಕ್ಕೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ಗಂಟೆ 6.00 ರಿಂದ ಭಜನಾ ಕಾರ್ಯಕ್ರಮ ಸಂಜೆ 7ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಎಡನೀರು ಮಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ರವೀಶ ತಂತ್ರಿಗಳು ಕುಂಟಾರು ‘ದೇವಾಲಯಗಳು ಹಿಂದೂ ಸಂಸ್ಕೃತಿಯ ಕೈಗನ್ನಡಿ’ ಎಂಬ ವಿಷಯದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ನಾಗೇಶ ತಂತ್ರಿ ಕೆಮ್ಮಿಂಜೆ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ವೇದವ್ಯಾಸ ಕಾಮತ್, ಮಾಜಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಕೆ. ಸೀತಾರಾಮ ರೈ ಸವಣೂರು, ಮುರಳಿಕೃಷ್ಣ ಹಸಂತ್ತಡ್ಕ, ಗ್ರಾ.ಪಂ.ಅಧ್ಯಕ್ಷ
ರಾಮಣ್ಣ ಜಾಲ್ತಾರು, ಮಾಧವ ಜಿ., ಯೋಜನಾಧಿಕಾರಿಗಳು, ಶ್ರೀ ಧ.ಗ್ರಾ. ಯೋಜನೆ, ಎನ್. ಸೀತಾರಾಮಯ್ಯ ಕೆಂಜೂರು, ಭಾಗವಹಿಸಲಿದ್ದಾರೆ.
ರಾತ್ರಿ ಗಂಟೆ ರಿಂದ 9 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಜ.2ರಂದು ಬೆಳಿಗ್ಗೆ ಗಂಟೆ 5.30 ರಿಂದ ವೈದಿಕ ಕಾರ್ಯಕ್ರಮ ನಡೆಯಲಿದೆ.ಸಂಜೆ ಗಂಟೆ 6.00 ರಿಂದ ಭಜನಾ ಕಾರ್ಯಕ್ರಮ 7ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.ಉಡುಪಿ ಶ್ರೀ ಕಾಣಿಯೂರು ರಾಮತೀರ್ಥ ಮಠದ ಶ್ರೀ ವಿದ್ಯಾವಲ್ಲಭ ತೀರ್ಥಶ್ರೀಪಾದರು ಆಶೀರ್ವಚನ ನೀಡುವರು.ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಕಾರ್ತಿಕ್ ತಂತ್ರಿ ಕೆಮ್ಮಿಂಜೆ
‘ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ’ ಎಂಬ ವಿಷಯದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡುವರು.ಶಾಸಕ ಭರತ್ ಶೆಟ್ಟಿ, ಪ್ರಮುಖರಾದ ಸತೀಶ್ ಕುಂಪಲ,ಚಂದ್ರಶೇಖರ ತಳೂರು,ಎಸ್.ಎನ್.ಮನ್ಮಥ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಗೋವಿಂದ ನಾಯಕ್, ಜಾಕೆ ಮಾಧವ ಗೌಡ, ನಿತ್ಯಾನಂದ ಮುಂಡೋಡಿ,ಎ.ವಿ. ತೀರ್ಥರಾಮ,ವೆಂಕಟ್ ವಳಲಂಬೆ, ಶ್ರೀನಿಧಿ ಆಚಾರ್ ಭಾಗವಹಿಸಲಿದ್ದಾರೆ.
ರಾತ್ರಿ ರಿಂದ 9.00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಜ.3 ರಂದು ಬೆಳಿಗ್ಗೆ 5.30 ರಿಂದ ವೈದಿಕ ಕಾರ್ಯಕ್ರಮಗಳು, ಸಂಜೆ 5.30 ರಿಂದ ವೈದಿಕ ಕಾರ್ಯಕ್ರಮ ಸಂಜೆ 6.00 ರಿಂದ ದೇವಳದ ಪವಿತ್ರ ತೀರ್ಥಕೆರೆ ಮತ್ತು ತೀರ್ಥಬಾವಿ ಲೋಕಾರ್ಪಣೆ, ಗಂಗಾ ಪೂಜೆ, ದೀಪೋತ್ಸವ ಮತ್ತು ಗೋಪೂಜೆ ನಡೆಯಲಿದೆ.
ಸಂಜೆ ಗಂಟೆ 6.00 ಭಜನಾ ಕಾರ್ಯಕ್ರಮ 7 ರಿಂದ
ಧಾರ್ಮಿಕ ಸಭೆ ನಡೆಯಲಿದೆ. ಸಾದ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡುವರು.ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸುವರು.ಹಾರಿಕಾ ಮಂಜುನಾಥ್ ‘ಭಾರತೀಯ ಕುಟುಂಬ ಪದ್ಧತಿಗಳು ಮತ್ತು ಜಾಗೃತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ’ ವಿಷಯದಲ್ಲಿ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ
ಮಲ್ಲಿಕಾ ಪಕಳ ಮತ್ತಿತರರು ಭಾಗವಹಿಸಲಿದ್ದಾರೆ.
ರಾತ್ರಿ 9.00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ.

ಜ.4 ರಂದು ಬೆಳಿಗ್ಗೆ ಗಂಟೆ 5.30 ರಿಂದ ಮತ್ತು ಸಂಜೆ 5.30 ರಿಂದ ವೈದಿಕ ಕಾರ್ಯಕ್ರಮ ಸಂಜೆ 6 ರಿಂದ ಭಜನಾ ಕಾರ್ಯಕ್ರಮ, 7 ರಿಂದ ಧಾರ್ಮಿಕ ಸಭೆ ನಡೆಯಲಿದೆ.ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ,
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ
ಆಶೀರ್ವಚನ ನೀಡುವರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಅವರು ಭಾರತೀಯ ಕುಟುಂಬ ಪದ್ಧತಿಯ ವೈಶಿಷ್ಟ್ಯಗಳು ಎಂಬ ವಿಷಯದಲ್ಲಿ ಧಾರ್ಮಿಕ ಉಪನ್ಯಾಸ ನೀಡುವರು.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ,ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಶಾಸಕರಾದ ಹರೀಶ್ ಪೂಂಜಾ, ಯಶಪಾಲ್ ಎ ಸುವರ್ಣ, ಅಶೋಕ್ ಕುಮಾರ್ ರೈ, ಪ್ರಮುಖರಾದ ಚಿಕ್ಕರಾಜೇಂದ್ರ ಶೆಟ್ಟಿ, ನ. ಸೀತಾರಾಮ, ಹರೀಶ್ ಕಂಜಿಪಿಲಿ, ಪದ್ಮನಾಭ ಶೆಟ್ಟಿ ಪೆರುವಾಜೆ ಭಾಗವಹಿಸಲಿದ್ದಾರೆ.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಜ.5ರಂದು ಬೆಳಿಗ್ಗೆ ಮತ್ತು ಸಂಜೆ 5.30 ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ.ಬೆಳಿಗ್ಗೆ ಗಂಟೆ 9.30 ರಿಂದ ‘ಸಾಮಾಜಿಕ ಪರಿವರ್ತನೆಯಲ್ಲಿ ನಮ್ಮ ಪಾತ್ರ – ಸಂವಾದ ನಡೆಯಲಿದೆ.
ಸಂಜೆ ಗಂಟೆ 6.00 ಭಜನಾ ಕಾರ್ಯಕ್ರಮ ಸಂಜೆ ಗಂಟೆ 7.00 ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು,ಶುಭಾಶಂಸನೆ ಮಾಡುವರು. ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡುವರು.’ಭಾರತ ಕಂಡ ಮಹಾನ್ ಸನ್ಯಾಸಿ ಸ್ವಾಮಿ ವಿವೇಕಾನಂದ’ ಎಂಬ ವಿಷಯದಲ್ಲಿ ಅವಿನಾಶ್ ಕೊಡೆಂಕಿರಿ ಧಾರ್ಮಿಕ ಉಪನ್ಯಾಸ ನೀಡುವರು.ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಅಧ್ಯಕ್ಷತೆ ವಹಿಸುವರು.
ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಉಮಾನಾಥ್ ಕೋಟ್ಯಾನ್, ಮಾಜಿ ಸಚಿವ ಎಸ್. ಅಂಗಾರ, ಡಾ. ಟಿ. ಶ್ಯಾಮ್ ಭಟ್, ಶ್ರೀ ಧ.ಗ್ರಾ. ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್,
ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ಪರಮೇಶ್ವರಯ್ಯ ಹೆಗ್ಗಡೆಯವರು, ಮೋಹನ್ ಗೌಡ ಇಡ್ಯಡ್ಕ,ರಾಕೇಶ್ ರೈ ಕೆಡೆಂಜಿ ಭಾಗವಹಿಸಲಿದ್ದಾರೆ.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಬ್ರಹ್ಮಕಲಶಾಭಿಷೇಕ:
ಜ.6 ರಂದು ಬೆಳಿಗ್ಗೆ ಗಂಟೆ 5.00 ರಿಂದ : ಮಹಾಗಣಪತಿ ಹೋಮ, ಚಂಡಿಕಾಹೋಮದ ಪ್ರಾರಂಭ ಗಂಟೆ 8-23 ರಿಂದ 09-23 ವರೆಗೆ ನಡೆಯುವ ಮಕರ ಲಗ್ನ ಶುಭಮುಹೂರ್ತದಲ್ಲಿ
ಶ್ರೀ ಮಹಿಷಮರ್ದಿನೀ ದೇವರಿಗೆ ಅಷ್ಟಬಂಧಕ್ರಿಯೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.ಮಧ್ಯಾಹ್ನ ಗಂಟೆ 12.00ಕ್ಕೆ : ಚಂಡಿಕಾ ಹೋಮದ ಪೂರ್ಣಾಹುತಿ, ಸುವಾಸಿನೀ ಆರಾಧನೆ, ಮಹಾಪೂಜೆ, ವೈದಿಕಮಂತ್ರಾಕ್ಷತೆ,
ಸಂಜೆ ಗಂಟೆ 6.30ರಿಂದ : ಪ್ರಸಾದ ವಿತರಣೆ, ಅನ್ನಸಂತರ್ಪಣೆ ಶ್ರೀ ದೇವರಿಗೆ ದೊಡ್ಡ ರಂಗ ಪೂಜೆ, ಮಹಾಪೂಜೆ
ರಾತ್ರಿ ಗಂಟೆ 8.30ರಿಂದ : ಶ್ರೀ ದೇವರ ಬಲಿ ಹೊರಟು, ಶ್ರೀಭೂತಬಲಿ ಉತ್ಸವ, ವಸಂತ ಕಟ್ಟೆ ಪೂಜೆ, ಬೆಡಿ ಪ್ರದರ್ಶನ ಸಂಜೆ ಗಂಟೆ 6.00 ಭಜನಾ ಕಾರ್ಯಕ್ರಮ, ರಾತ್ರಿ 9 ರಿಂದ ಸಾಂಸ್ಕೃತಿಕ ವೈಭವ
ನಡೆಯಲಿದೆ.
ಜ.7 ರಂದು ಬೆಳಿಗ್ಗೆ ಗಂಟೆ 7.00 ರಿಂದ ಮಹಾಗಣಪತಿ ಹೋಮ, ಕಲಶ ಪೂಜೆ ಬೆಳಿಗ್ಗೆ ಗಂಟೆ 9.00 ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನಬಲಿ.ಮಧ್ಯಾಹ್ನ ಗಂಟೆ 12.00 ರಿಂದ ಬಟ್ಟಲು ಕಾಣಿಕೆ,
ಸಂಜೆ ಗಂಟೆ 4.00 ರಿಂದ: ರಕೇಶ್ವರಿ ಮತ್ತು ಪರಿವಾರ ದೈವಗಳ ಭಂಡಾರ ದೇವಸ್ಥಾನಕ್ಕೆ ಬರುವುದು.
ಸಂಜೆ 6.00 ರಿಂದ ರಕೇಶ್ವರಿ ಮತ್ತು ಪರಿವಾರ ದೈವಗಳಾದ ಪಂಜುರ್ಲಿ, ಮಹಿಷಂತಾಯ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ
ರಾತ್ರಿ ಗಂಟೆ 8.00 ರಿಂದ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷೆ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಸಂತ ನಡುಬೈಲು ತಿಳಿಸಿದ್ದಾರೆ.