ಜಾಲ್ಸೂರು: ರೋಟರಿ ಕ್ಲಬ್ ಸುಳ್ಯ ಇವರ ನೇತೃತ್ವದಲ್ಲಿ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಹಾಗೂ ಇನ್ನಿತರ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಡಿ.29ರಂದು ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯಲ್ಲಿ
ನಡೆಯಿತು.ಸುಳ್ಯ ರೋಟರಿ ಕ್ಲಬ್ ಪೂರ್ವಾಧ್ಯಕ್ಷ, ಸಹಕಾರಿ ರತ್ನ ಸವಣೂರು ಸೀತಾರಾಮ ರೈಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಬಾಲ್ಯದಲ್ಲಿಯೇ ಕಣ್ಣಿನ ತಪಾಸಣೆ ಮಾಡುವುದರಿಂದ
ಮುಂದಕ್ಕೆ ಬರುವ ಅಪಾಯ ತಡೆಗಟ್ಟಬಹುದು. ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಇಂತಹ ಉಚಿತ ತಪಾಸಣೆಯ ಪ್ರಯೋಜನ ಸದುಪಯೋಗಪಡಿಸಿಕೊಳ್ಳಿ ” ಎಂದರು. ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಯೋಗಿತಾ ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪಯಸ್ವಿನಿ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ, ಸಂಚಾಲಕ ಜಾಕೆ ಸದಾನಂದ ಭಾಗವಹಿಸಿ ಶುಭ ಹಾರೈಸಿದರು.
ಇದೇ ಸಂದರ್ಭ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ ರವರಿಗೆ ಮೌನ ಪ್ರಾರ್ಥನೆ ಮಾಡಲಾಯಿತು.ವಿಜಯ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ತಿರುಮಲೇಶ್ವರಿ ಆರ್ಭಡ್ಕ ವಂದಿಸಿದರು. ಆಕಾಂಕ್ಷ ಕಜೆಗದ್ದೆ ಪ್ರಾರ್ಥಿಸಿದರು. ಹೇಮಲತಾ ಕಜೆಗದ್ದೆ ಕಾರ್ಯಕ್ರಮ ನಿರೂಪಿಸಿದರು.ಶಿಬಿರದಲ್ಲಿ ಸುಮಾರು 100 ಕ್ಕಿಂತಲೂ ಹೆಚ್ಚು ಜನ ಭಾಗವಹಿಸಿ ಸದುಪಯೋಗ ಪಡೆದುಕೊಂಡರು. ಅಗತ್ಯವಿದ್ದವರಿಗೆ ಪೊರೆ ಚಿಕಿತ್ಸೆ ಹಾಗೂ ಕನ್ನಡಕದ ಬಗ್ಗೆ ಮಾಹಿತಿ ನೀಡಿದರು.
ಅಭಿನಂದನೆ:
ಇತ್ತೀಚಿಗೆ ನಡೆದ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಆಡಳಿತ ನಿರ್ದೇಶಕರಾಗಿ ಚುಣಾಯಿತರಾದ ಜಾಲ್ಸೂರು
ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಸದಸ್ಯ ಗಂಗಾಧರ ಗೌಡ ಕಾಳಮನೆಯವರನ್ನು ಸಮಿತಿಯ ಪರವಾಗಿ ಸವಣೂರು ಸೀತಾರಾಮ ರೈಯವರು ಶಾಲು, ಹಾರ ಹಾಕಿ ಅಭಿನಂದಿಸಿ ಗೌರವಿಸಿದರು.