ತಿರುವನಂತಪುರ: ಕುತೂಹಲ ಕೆರಳಿಸಿರುವ ಕೇರಳ ವಿಧಾನಸಭೆಯ 140 ಕ್ಷೇತ್ರಗಳ ಚುನಾವಣಾ ಮತ ಎಣಿಕೆ ಆರಂಭಗೊಂಡಿದ್ದು
ಪ್ರಥಮ ಸೂಚನೆ ಪ್ರಕಾರ ಕಾಂಗ್ರೆಸ್ ನೇತೃತ್ವದ ಯುಡಿಎಫ್ 86 ಸ್ಥಾನಗಳಲ್ಲಿ, ಸಿಪಿಐಎಂ ನೇತೃತ್ವದ ಎಲ್ಡಿಎಫ್ 49 ಸ್ಥಾನಗಳಲ್ಲಿ ಮತ್ತು
ಬಿಜೆಪಿ ನೇತೃತ್ವದ ಎನ್ಡಿಎ 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಸತತ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲು ಆಡಳಿತಾರೂಢ ಎಲ್ಡಿಎಫ್ ಕಸರತ್ತು ನಡೆಸಿದ್ದರೆ, ಈ ಬಾರಿ ‘ಕೈ’ ಹಿಡಿಯಲಿದ್ದಾರೆ ಎಂಬ ವಿಶ್ವಾಸದಲ್ಲಿ ಯುಡಿಎಫ್ ಇದೆ. ಈ ನಡುವೆ ಕೇಸರಿ ಪಡೆ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ.ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಮತ ಎಣಿಕೆ ಆರಂಭವಾಗಿದೆ.ಕೇರಳದಲ್ಲಿ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ರಾಜ್ಯದಲ್ಲಿ ಶೇ 79.70ರಷ್ಟು ಮತದಾನವಾಗಿತ್ತು.












