ಸುಳ್ಯ:ಸುಳ್ಯ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡಲಾಗುವುದು ಎಂದು ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಶಾಸಕರು ಕೊಡಮಾಡಿದ 20 ಲಕ್ಷ ರೂ ಅನುದಾನ ಮತ್ತು ಸ್ಥಳೀಯ ನಗರ ಪಂಚಾಯತ್ ನಿಕಟಪೂರ್ವ ಸದಸ್ಯೆ ಪ್ರವಿತಾ ಪ್ರಶಾಂತ್ ನೀಡಿದ ನಾಲ್ಕು ಲಕ್ಷ ರೂ ಅನುದಾನದಲ್ಲಿ ನಡೆದ
ಕಾಯರ್ತೋಡಿ ದೇವಸ್ಥಾನದ ರಸ್ತೆಯ ಕಾಂಕ್ರೀಟೀಕರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿ ಸುಳ್ಯ ನಗರದ ನಾಲ್ಕು ರಸ್ತೆಗಳಿಗೆ ತಲಾ 20 ಲಕ್ಷ ರೂನಂತೆ ನೀಡಿದ 80 ಲಕ್ಷ ರೂಗಳಲ್ಲಿ ಸೇರಿಸಿ ಈಗಾಗಲೇ ನಗರಕ್ಕೆ ಸುಮಾರು 2.25 ಕೋಟಿ ರೂ ಅನುದಾನವನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನವನ್ನು ತರಲು ಪ್ರಯತ್ನಿಸುವುದಾಗಿ ಅವರು ಹೇಳಿದರು.

ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಲಲಂಬೆ, ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಬಿಜೆಪಿ ಸುಳ್ಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎ.ಟಿ.ಕುಸುಮಾಧರ, ನಗರ ಪಂಚಾಯತ್ ನಿಕಟಪೂರ್ವ ಸದಸ್ಯೆ ಪ್ರವಿತಾ ಪ್ರಶಾಂತ್, ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಕಾಯರ್ತೋಡಿ ದೇವಸ್ಥಾನದ ನಿಕಟಪೂರ್ವ ಆಡಳಿತ ಸಮಿತಿ ಅಧ್ಯಕ್ಷ ಪಿ.ಕೆ. ಉಮೇಶ, ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾಗಿದ್ದ ಕೃಷ್ಣ ಕಾಮತ್, ರಸ್ತೆಗೆ ಈ ಹಿಂದೆ ಸ್ಥಳ ದಾನ ಮಾಡಿದ ದೆಂಗೋಡಿ ಕುಟುಂಬಸ್ಥರು ಮತ್ತು ಅಳಿಕೆ ಮಜಲು ಕುಟುಂಬಸ್ಥರು, ಕಾಯರ್ತೋಡಿ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರು, ಚಂದ್ರಶೇಖರ ಅಡ್ಪಂಗಾಯ, ಡಿ.ಎಸ್. ಗೋಪಾಲ್, ನಾರಾಯಣ ಶಾಂತಿನಗರ, ರಂಜಿತ್ ನೆಡ್ಚಿಲ್, ಸುನಿಲ್ ಕೇರ್ಪಳ, ಚಿದಾನಂದ ಕಾಯರ್ತೋಡಿ, ವಿಠಲ ಸರ್ವೆಯರ್ ಕಿಶೋರ್ ಕಾಯತೋಡಿ, ವಿಜಯ ದೆಂಗೋಡಿ, ಸಚಿನ್ ದೇಂಗೋಡಿ, ಶೀನಪ್ಪ ಪಡ್ರೆ, ಬಾಲರಾಜ್ ದೆಂಗೋಡಿ, ಕೃಷ್ಣ ಬೆಟ್ಟ, ಜಿನ್ನಪ್ಪ ಪೂಜಾರಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ನವೀನ್ ಕುದ್ಪಾಜೆ ಸ್ವಾಗತಿಸಿ, ದೇವಿ ಪ್ರಸಾದ್ ವಂದಿಸಿದರು.














