ಗ್ಲಾಸ್ಗೋ:ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಜೂಡೋ ವಿಭಾಗದಲ್ಲಿ ಅವಳಿ ಚಿನ್ನದ ಪದಕ ಪಡೆದ ಭಾರತ ಹೊಸ ಇತಿಹಾಸ ನಿರ್ಮಿಸಿದೆ. ಮಹಿಳೆಯರ 48 ಕೆಜಿ ವಿಭಾಗದಲ್ಲಿ ಅಸ್ಮಿತಾ ಡೇ ಹಾಗೂ ಪುರುಷರ 60 ಕೆಜಿ ವಿಭಾಗದಲ್ಲಿ
ಹರ್ಷ್ ಸಿಂಗ್ ಚಿನ್ನದ ಪದಕ ಗೆದ್ದು, ಕಾಮನ್ವೆಲ್ತ್ ಕ್ರೀಡಾಕೂಟದ ಜೂಡೋ ಸ್ಪರ್ಧೆಯಲ್ಲಿ ಭಾರತದ ಪರ ಚಿನ್ನ ಗೆದ್ದ ಮೊದಲ ಆಟಗಾರರಾಗಿ ದಾಖಲೆ ಬರೆದಿದ್ದಾರೆ.ಅಸ್ಮಿತಾ ಡೇ ಫೈನಲ್ನಲ್ಲಿ ಕೆನಡಾದ ಹೈಡಿ ಕ್ವಾಚ್ ವಿರುದ್ಧ ರೋಚಕ ಹೋರಾಟ ನಡೆಸಿದರು. 1-1ರಿಂದ ಸಮಬಲದಲ್ಲಿದ್ದ ಪಂದ್ಯ ಗೋಲ್ಡನ್ ಸ್ಕೋರ್ಗೆ ಸಾಗಿದ್ದು, ನಿರ್ಣಾಯಕ ಕ್ಷಣದಲ್ಲಿ ಅಸ್ಮಿತಾ ಯುಕೊ ಅಂಕ ಗಳಿಸಿ 2-1 ಅಂತರದಲ್ಲಿ ಗೆಲುವು ಸಾಧಿಸಿದರು.
ಪುರುಷರ 60 ಕೆಜಿ ವಿಭಾಗದ ಫೈನಲ್ನಲ್ಲಿ ಹರ್ಷ್ ಸಿಂಗ್ ಆಸ್ಟ್ರೇಲಿಯಾದ ಜೋಶುವಾ ಕ್ಯಾಟ್ಜ್ ವಿರುದ್ಧ 10-0 ಅಂತರದ ಭರ್ಜರಿ ಜಯ ದಾಖಲಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡರು.









