ಸುಳ್ಯ:ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಮಹಾಸಭೆ ಕನ್ನಡ ಭವನದಲ್ಲಿ ಜು.31ರಂದು ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್ ಆಯ್ಕೆಯಾದರು.ಪ್ರಧಾನ ಕಾರ್ಯದರ್ಶಿಯಾಗಿ
ಪಿ.ಎಂ.ರಂಗನಾಥ್, ಕೋಶಾಧಿಕಾರಿಯಾಗಿ ಚಂದ್ರಶೇಖರ ನಂಜೆ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪ್ರೊ.ಕೆ.ವಿ.ದಾಮೋದರ ಗೌಡ, ಸದಾನಂದ ಮಾವಜಿ, ವೀರಪ್ಪ ಗೌಡ ಕಣ್ಕಲ್, ದಿನೇಶ್ ಅಂಬೆಕಲ್ಲು ಮತ್ತು ಚಂದ್ರಮತಿ, ಕಾರ್ಯದರ್ಶಿಗಳಾಗಿ ಶಾಫಿ ಕುತ್ತಮೊಟ್ಟೆ, ಅಶೋಕ್ ಚೂಂತಾರು ಮತ್ತು ರಜತ್ ಅಡ್ಕಾರ್ ಅವರನ್ನು ಮತ್ತು

ಎಸ್.ಸಂಶುದ್ದೀನ್ ,ಪಿ.ಎಂ.ರಂಗನಾಥ್,ಚಂದ್ರಶೇಖರ ನಂಜೆ
ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ನಡೆಸಲಾಯಿತು. ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಟಿ.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್ ವರದಿ ವಾಚಿಸಿದರು. ಚಂದ್ರಾವತಿ ಬಡ್ಡಡ್ಕ ಲೆಕ್ಕಪತ್ರ ಮಂಡಿಸಿದರು.










