ಸುಳ್ಯ:ರೋಟರಿ ಕ್ಲಬ್ ಸುಳ್ಯ ಸಿಟಿಯ 2026-27ನೇ ಸಾಲಿನ ನೂತನ
ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 7ರಂದು ಸಂಜೆ 6.30ರಿಂದ ರಥಬೀದಿಯ ರೋಟರಿ ಸಮುದಾಯ ಭವನ ಸಭಾಂಗಣದಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ ಸುಳ್ಯ ಸಿಟಿಯ ನಿಯೋಜಿತ ಅಧ್ಯಕ್ಷ ರಾಗೇಶ್ ರಾಘವ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಅವರು ಮಾತೃ ಸಂಸ್ಥೆಯಾದ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್ ಪದಗ್ರಹಣ ನೆರವೇರಿಸಲಿದ್ದಾರೆ. ಡಿಸ್ಟ್ರಿಕ್ಟ್ ಚೀಫ್ ಎಡ್ವೈಸರ್ ಎ.ಆರ್.ರವೀಂದ್ರ ಭಟ್, ವಲಯ 5ರ ಅಸಿಸ್ಟೆಂಟ್ ಗವರ್ನರ್ ಆನಂದ ಖಂಡಿಗ, ಝೋನಲ್ ಲೆಫ್ಟಿನೆಂಟ್ ಗಿರೀಶ್ ನಾರ್ಕೋಡ್, ಗವರ್ನರ್ ಅವರ ವಿಶೇಷ ಪ್ರತಿನಿಧಿ ಡಾ.ಕೇಶವ. ಪಿ.ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ರೋಟರಿ ಕ್ಲಬ್ ವತಿಯಿಂದ ಈ ವರ್ಷ ಶಿಕ್ಷಣ, ರಸ್ತೆ ಸುರಕ್ಷತೆ, ಜಲ ಸಂರಕ್ಷಣೆ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವಾ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಜಿಲ್ಲಾ ಯೋಜನೆ ಹಾಗು ಕ್ಲಬ್ ಯೋಜನೆಯಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಗೇಶ್ ರಾಘವ್
ವಿವರಿಸಿದರು.ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ

ಸುಳ್ಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆಗೆ ಸಂಬಂಧಿಸಿ ಆಪ್ತೋಮೋಲಜಿ ಯೂನಿಟ್ ನಿರ್ಮಾಣ ಮಾಡುವ ಯೋಜನೆ ಹಮ್ಮಿಕೊಂಡಿದ್ದು ಗ್ಲೋಬಲ್ ನೆರವಿನಿಂದ 35 ಲಕ್ಷ ವೆಚ್ಚದಲ್ಲಿ ಮಾಡುವ ಯೋಜನೆಗೆ ಸಂಬಂಧಿಸಿದ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ರೋಟರಿ ಕ್ಲಬ್ನ ಹಾಲಿ ಅಧ್ಯಕ್ಷ ಹೇಮಂತ್ ಕಾಮತ್.ಕೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರೋಟರಿ ಝೋನಲ್ ಲೆಪ್ಟಿನೆಂಟ್ ಗಿರೀಶ್ ನಾರ್ಕೋಡು, ರೋಟರಿ ಕ್ಲಬ್ ಸುಳ್ಯ ಸಿಟಿಯ ನಿಯೋಜಿತ ಕಾರ್ಯದರ್ಶಿ ಪುರಂದರ ರೈ.ಪಿ, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಪ್ರೀತಮ್.ಡಿ.ಕೆ, ಕ್ಲಬ್ ಎಕ್ಸಿಕ್ಯುಟಿವ್ ಚೇರ್ಮೆನ್ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.








