ನ್ಯೂಜೆರ್ಸಿ:ಬ್ರೆಜಿಲ್ ಹಾಗೂ ಮೊರೊಕ್ಕೊ ನಡುವಿನ ಫಿಫಾ ವಿಶ್ವಕಪ್ ಪಂದ್ಯವು ಡ್ರಾನಲ್ಲಿ ಮುಕ್ತಾಯವಾಯಿತು.ನ್ಯೂಜೆರ್ಸಿ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲು ಗಳಿಸಿ ಸಮಬಲದ ಹೋರಾಟ ನಡೆಸಿದವು.ಮೊರೊಕ್ಕೊ ಪರ
ಇಸ್ಮಾಯಿಲ್ ಸಿಬ್ರಿ 21ನೇ ನಿಮಿಷದಲ್ಲೇ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಬ್ರೆಜಿಲ್ನ ವಿನ್ಸಿಯಸ್ ಜೂನಿಯರ್ 32ನೇ ನಿಮಿಷದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದರು. ಇದರೊಂದಿಗೆ ಹೋರಾಟ ಸಮವಾಯಿತು.ಬ್ರೆಜಿಲ್ ಪಡೆ ದ್ವಿತೀಯಾರ್ಧದಲ್ಲಿ ಹಲವು ಬದಲಿ ಆಟಗಾರರೊಂದಿಗೆ ಪರಿಣಾಮಕಾರಿಯಾಗಿ ಆಡಿತಾದರೂ, ಮೊರೊಕ್ಕೊ ಭದ್ರಕೋಟೆಯನ್ನು ದಾಟಲು ಸಾಧ್ಯವಾಗಲಿಲ್ಲ. ಹೀಗಾಗಿ ಉಳಿದ ಸಮಯದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ.
ಕತಾರ್, ಸ್ವಿಸ್ ಪಂದ್ಯವೂ ಡ್ರಾ:
ದಿನದ ಮತ್ತೊಂದು ಪಂದ್ಯದಲ್ಲಿ ಕತಾರ್ ಹಾಗೂ ಸ್ವಿಟ್ಜರ್ಲೆಂಡ್ ತಂಡಗಳು ಸೆಣಸಾಟ ನಡೆಸಿದವು. ಈ ಪಂದ್ಯವೂ ಡ್ರಾನಲ್ಲಿ (1-1 ಗೋಲು) ಕೊನೆಗೊಂಡಿತು.ಸ್ವಿಸ್ ಪರ ಬ್ರೀಲ್ ಎಂಬೊಲೊ ಹಾಗೂ ಕತಾರ್ ಪರ ಮಿರೊ ಮುಹೈಮ್ ಒಂದೊಂದು ಗೋಲು ಗಳಿಸಿದರು.














