ಸುಳ್ಯ: ಆಧುನಿಕ ಜಗತ್ತು ನಿರಂತರ ಬದಲಾವಣೆ ಆಗುತ್ತಿದೆ, ಇಂಟರ್ನೆಟ್, ಕಂಪ್ಯೂಟರ್ ಮೊಬೈಲ್ಗಳು ಇಂದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಆಧುನಿಕ ಯುಗದಲ್ಲಿ ಎಲ್ಲರೂ ಕಂಪ್ಯೂಟರ್ ಜ್ಞಾನವಂತರಾಗಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಸುಳ್ಯದ ಎಕ್ಸ್ಕ್ಲೂಸಿವ್ ಲಾಪ್ಟಾಪ್ ಶೋರೂಮ್ ‘ಶ್ರೀ ಇನ್ಫೋ’ ಲ್ಯಾಪ್ಟಾಪ್ ಸೆಂಟರ್’ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಹಕರಿಗೆ
ಉತ್ತಮ ಸೇವೆ ನೀಡುವ ಮೂಲಕ ಸಂಸ್ಥೆಯು ಯಶಸ್ಸಿನ ಉತ್ತುಂಗಕ್ಕೆ ಏರಲಿ ಎಂದು ಅವರು ಹಾರೈಸಿದರು.ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಯ ಸೌಪರ್ಣಿಕಾ ಆರ್ಕೇಡ್ನ ಪ್ರಥಮ ಮಹಡಿಯಲ್ಲಿ ಶ್ರೀ ಇನ್ಪೋ ಲ್ಯಾಪ್ಟಾಪ್ ಸೆಂಟರ್ ಕಾರ್ಯಾರಂಭ ಮಾಡಿತು.
ಮುಖ್ಯ ಅತಿಥಿಯಾಗಿದ್ದ ವರ್ತಕರ ಸಂಘದ ಗೌರವಾಧ್ಯಕ್ಷ ಪಿ.ಬಿ.ಸುಧಾಕರ ರೈ ಮಾತನಾಡಿ ಕಂಪ್ಯೂಟರ್ ಕ್ಷೇತ್ರದಲ್ಲಿ ಪ್ರತಿ ದಿನ ಬದಲಾವಣೆಗಳು ಸಂಭವಿಸುತ್ತದೆ,ಬದಲಾವಣೆಗೆ ತಕ್ಕಂತೆ ಗ್ರಾಹಕರಿಗೆ ತ್ವರಿತ ಸೇವೆ ನೀಡಿ ಗ್ರಾಹಕರ ಮೆಚ್ಚುಗೆ ಪಡೆಯಬೇಕು ಎಂದರು. ಸಾರ್ವಜನಿಕರು ಸ್ಥಳೀಯ ಶೋರೂಮ್ಗಳಿಂದಲೇ ಖರೀದಿಸುವ ಮೂಲಕ ಇಲ್ಲಿನ

ವ್ಯಾಪಾರಸ್ಥರಿಗೆ ಪ್ರೋತ್ಸಾಹ ನೀಡಬೇಕು ಎಂದರು. ಸೌಪರ್ಣಿಕಾ ಆರ್ಕೇಡ್ನ ಮಾಲಕ ನಾರಾಯಣ ಮಣಿಯಾಣಿ ಅತಿಥಿಯಾಗಿದ್ದರು. ಶ್ರೀ ಇನ್ಫೋ ಲ್ಯಾಪ್ಟಾಪ್ ಸೆಂಟರ್ನ ಮಾಲಕರಾದ ಸತೀಶ್ ಕಾಟೂರು, ಶ್ರೀವತ್ಸ ಕಾಟೂರು, ರಾಧಿಕಾ ಕಾಟೂರು, ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲ ಅನೀಶ್ನಾದ್ ಉಪಸ್ಥಿತರಿದ್ದರು. ಸತೀಶ್ ಕಾಟೂರು ಸ್ವಾಗತಿಸಿ, ವಂದಿಸಿದರು. ಉದಯಭಾಸ್ಕರ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.
ಪ್ರಮುಖರಾದ ಶ್ರೀನಿವಾಸ ಉಬರಡ್ಕ, ಸುಬೋದ್ ಶೆಟ್ಟಿ ಮೇನಾಲ,ಮಹೇಶ್ ಮೇರ್ಕಜೆ, ಸತೀಶ್ ಕುಂಭಕ್ಕೋಡು,
ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಅಧ್ಯಕ್ಷ ಕೃಷ್ಣನ್ ನಾಯರ್ ಕುತ್ತಮೊಟ್ಟೆ, ಕಾರ್ಯದರ್ಶಿ ಶಶಿಧರ ಉಬರಡ್ಕ, ಪದ್ಮನಾಭನ್ ನಾಯರ್ ಮಧುವನ, ಭಾಸ್ಕರನ್ ನಾಯರ್, ಪ್ರಭಾಕರನ್ ನಾಯರ್ ಸಿ.ಎಚ್, ಗಿರೀಶ್ ಕಲ್ಲುಗದ್ದೆ,ಕಿಶೋರಿ ಶೇಟ್, ಭವಾನಿಶಂಕರ ಕಲ್ಮಡ್ಕ, ದೇವಿಪ್ರಸಾದ್ ಅತ್ಯಾಡಿ, ಪ್ರಸಾದ್ ಕಾಟೂರು, ಕೃಷ್ಣಕುಮಾರ್, ಲೋಕೇಶ್ ಕೆರೆಮೂಲೆ, ಪ್ರವೀಣ್ ಕಾಟೂರು, ರಾಜೇಶ್ ಮೇನಾಲ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ಇನ್ಫೋ ಕಂಪ್ಯೂಟರ್ಸ್ನ ಸಹ ಸಂಸ್ಥೆಯಾದ
ಶ್ರೀ ಇನ್ಫೋ ಲ್ಯಾಪ್ಟಾಪ್ ಸೆಂಟರ್ ಲ್ಯಾಪ್ಟಾಪ್ಗಳ ಮಾರಾಟ ಮತ್ತು ಸೇವೆಗಾಗಿ ಇರುವ ಸುಳ್ಯದ ಎಕ್ಸ್ಕ್ಲೂಸಿವ್ ಶೋರೂಮ್ ಆಗಿರಲಿದೆ. ಶ್ರೀ ಇನ್ಫೋ ಕಂಪ್ಯೂಟರ್ಸ್ ಕಂಪ್ಯೂಟರ್, ಲ್ಯಾಪ್ಟಾಪ್ ಸೇಲ್ಸ್ ಮತ್ತು ಸರ್ವೀಸ್ ಕ್ಷೆತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಬೆಳೆದಿದೆ. ಶ್ರೀ ಇನ್ಫೋ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡುವ ದೃಷ್ಟಿಯಿಂದ ಎಲ್ಲಾ ರೀತಿಯ ಲ್ಯಾಪ್ಟಾಪ್ಗಳ ಮಾರಾಟ ಮತ್ತು ಸರ್ವೀಸ್ಗಾಗಿ ನೂತನ ಲ್ಯಾಪ್ಟಾಪ್ ಶೋರೂಮ್ ಆರಂಭಿಸಲಾಗಿದೆ. ಇಲ್ಲಿ ಎಲ್ಲಾ ಕಂಪೆನಿಗಳ ವಿವಿಧ

ಶ್ರೇಣಿಯ ಬ್ರಾಂಡೆಡ್ ಲ್ಯಾಪ್ಟಾಪ್ಗಳು ಲಭ್ಯವಿದೆ.
ಆಕರ್ಷಕ ಆಫರ್:
ಉದ್ಘಾಟನೆಯ ಪ್ರಯುಕ್ತ ಶ್ರೀ ಇನ್ಫೋ ಲ್ಯಾಪ್ಟಾಪ್ ಸೆಂಟರ್ನಲ್ಲಿ ಆಕರ್ಷಕ ಆಫರ್ಗಳು ಲಭ್ಯವಿದೆ. ಎಲ್ಲಾ ಬ್ರಾಂಡ್ಗಳ ಆಕರ್ಷಕ ಲ್ಯಾಪ್ಟಾಪ್ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ.ಉದ್ಘಾಟನೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮತ್ತು ಗ್ರಾಹಕರಿಗೆ ಲ್ಯಾಪ್ ಟಾಪ್ ಖರೀದಿಗೆಂದು ಭರ್ಜರಿ ಆಫರ್ ಘೋಷಿಸಿದೆ.ಅಂದರೆ ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟಾಪ್ ದರ ಸಿಕ್ಕಾಪಟ್ಟೆ ಏರಿಕೆ ಕಂಡಿದೆ.ಹೆಚ್ಚು ಕಮ್ಮಿ ದರ ಎರಡು ಪಟ್ಟು ಏರಿಕೆಯಾಗಿರುವುದು ಗೊತ್ತೇ ಇದೆ. ಇಂತಹಾ ಸಂದರ್ಭದಲ್ಲಿ ನೂತನ ಲ್ಯಾಪ್ಟಾಪ್ ಖರೀದಿಸುವ ವಿದ್ಯಾರ್ಥಿಗಳಿಗೆ ಮತ್ತು ಗ್ರಾಹಕರಿಗೆ ಹಳೆಯ ದರದಲ್ಲಿಯೇ ನೂತನ ಲ್ಯಾಪ್ಟಾಪ್ ಖರೀದಿಸುವ

ಸುವರ್ಣಾವಕಾಶವನ್ನೂ ನೀಡಲಾಗಿದೆ.ಸೀಮಿತ ಸ್ಟಾಕ್ ಮಾತ್ರ ಲಭ್ಯವಿದ್ದು ಸೀಮಿತ ಅವಧಿಗೆ ಈ ಆಫರ್ ನೀಡಲಾಗುವುದು.
ಹೊಸ ದರದಲ್ಲಿಯೂ ಅತ್ಯಧುನಿಕ ವಿನ್ಯಾಸದ ಆಕರ್ಷಕ ಲ್ಯಾಪ್ಟಾಪ್ಗಳು ಲಭ್ಯವಿದೆ.ಅಲ್ಲದೆ ಪ್ರತಿ ಲ್ಯಾಪ್ಟಾಪ್ ಖರೀದಿಗೆ ಉಚಿತ ಉಡುಗೊರೆಗಳನ್ನು ನೀಡಲಾಗುತ್ತದೆ.ಅಲ್ಲದೆ ಪ್ರತಿ ವಾರ ಡ್ರಾ ನಡಸಿ ಅದೃಷ್ಟ ಗ್ರಾಹಕರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು.ಲ್ಯಾಪ್ಟಾಪ್ ಖರೀದಿಗೆ ಆಕರ್ಷಕ ಆಫರ್ಗಳನ್ನು ನೀಡಲಾಗುವುದು. ಲ್ಯಾಪ್ಟಾಪ್ ಖರೀದಿಸಲು ಆಕರ್ಷಕ ಇಎಂಐ ಹಾಗು ಕ್ಯಾಶ್ ಬ್ಯಾಕ್ ಸೌಲಭ್ಯವೂ ಇದೆ.ಎಲ್ಲಾ ಖರೀದಿಗೆ ಸುಲಭ ಕಂತುಗಳ ಇಎಂಐ ಲೋನ್ ವ್ಯವಸ್ಥೆ ಇದೆ. ಲ್ಯಾಪ್ಟಾಪ್ ಖರೀದಿಸಲು ಪ್ಲಾನ್ ಮಾಡಿರುವ ವಿದ್ಯಾರ್ಥಿಗಳು, ಸಾರ್ವಜನಿಕರು ಈ ಅವಕಾಶವನ್ನು

ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ. ಎಲ್ಲಾ ಪ್ರಸಿದ್ಧ ಕಂಪೆನಿಗಳ ಲ್ಯಾಪ್ಟಾಪ್ಗಳ ಸ್ಟಾಕ್ಗಳು ಲಭ್ಯವಿದೆ.ಆಫಲ್ ಮ್ಯಾಕ್ಬುಕ್, ಏಸರ್, ಡೆಲ್,ಆಸಸ್, ಲೆನೊವೊ, ಮತ್ತಿತರ ಬ್ರಾಂಡೆಡ್ ಲ್ಯಾಪ್ಟಾಪ್ಗಳು ಇದೆ. ಶ್ರೀ ಇನ್ಫೋ ಲ್ಯಾಪ್ಟಾಪ್ ಸೆಂಟರ್ನಲ್ಲಿ ಐಫೋನ್, ನತ್ತಿಂಗ್, ಸ್ಯಾಮ್ಸಂಗ್, ನೋಕಿಯಾ ಕಂಪೆನಿಗಳ ಆಕರ್ಷಕ ಸ್ಮಾರ್ಟ್ ಫೋನ್ಗಳು ಕೂಡ ಲಭ್ಯವಿದೆ. ತಮ್ಮ ಇಷ್ಟದ ಲ್ಯಾಪ್ಟಾಪ್ಗಳ ಬುಕ್ಕಿಂಗ್ ಮಾಡಲು ಅವಕಾಶ ಇದೆ. ಎಂದು ಶ್ರೀ ಇನ್ಫೋ ಕಂಪ್ಯೂಟರ್ ಸೆಂಟರ್ನ ಮಾಲಕರಾದ ಸತೀಶ್ ಕಾಟೂರು ಹಾಗು ಶ್ರೀವತ್ಸ ಕಾಟೂರು ತಿಳಿಸಿದ್ದಾರೆ.
ಲ್ಯಾಪ್ಟಾಪ್ ಖರೀದಿ ಹಾಗು ಇತರ ಮಾಹಿತಿಗಾಗಿ ಸಂಪರ್ಕಿಸಿ:
ಸತೀಶ್ ಕಾಟೂರು
08257-359321
9743746985, 9886107232,








