ಸುಳ್ಯ:ಬಾವಿಗೆ ಬಿದ್ದ ಆಡೊಂದನ್ನು ಅಗ್ನಿಶಾಮಕ ದಳದವರು ಆಗಮಿಸಿ ರಕ್ಷಿಸಿದ ಘಟನೆ ಹಳೆಗೇಟಿನಲ್ಲಿ ನಡೆದಿದೆ. ಮಂಗಳವಾರ ಸಂಜೆ ಹಳೆಗೇಟಿನ ಹೊಸಗದ್ದೆ ಕಟ್ಟೆಯ ಬಳಿ ಖಾಸಗೀಯವರ ಕುಡಿಯುವ ನೀರಿನ ಬಾವಿಗೆ ಆಡೊಂದು ಬಿದ್ದಿದೆ. ಕೂಡಲೇ
ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆಡನ್ನು ಮೇಲಕ್ಕೆ ಎತ್ತಲಾಯಿತು. ಅಬ್ದುಲ್ ಮಜೀದ್, ಅಬ್ದುಲ್ ರಝಾಕ್, ನಾಝಿರ್, ಸತ್ಯಪ್ರಕಾಶ್ ಮತ್ತಿತರರು ಸಹಕರಿಸಿದರು.ಹಳೆಗೇಟಿನ ಹೊಸಗದ್ದೆ, ಮಿಲಿಟ್ರಿ ಗ್ರೌಂಡ್ ಭಾಗದಲ್ಲಿ ಆಡುಗಳನ್ನು, ಸಾಕು ನಾಯಿಗಳನ್ನು

ಬೇಕಾ ಬಿಟ್ಟಿ ಬಿಡುವುದರಿಂದ ಆಡುಗಳು, ನಾಯಿಗಳು ಕಾಂಪೌಂಡ್ಗಳಿಗೆ, ಮನೆಗಳಿಗೆ ನುಗ್ಗಿ ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡುತಿವೆ. ಆಡುಗಳು, ನಾಯಿಗಳು ರಸ್ತೆಯಲ್ಲಿಯೇ ಸಂಚರಿಸಿ ವಾಹನ ಸವಾರರಿಗೂ ಸಮಸ್ಯೆ ಉಂಟು ಮಾಡುತಿದೆ. ಆದುದರಿಂದ ಆಡುಗಳನ್ನು ಮತ್ತು ಸಾಕು ನಾಯಿಗಳನ್ನು ಬೇಕಾ ಬಿಟ್ಟಿ ಬಿಡದೆ ಕಟ್ಟಿ ಹಾಕಿ ಸಾಕಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.







