ಸುಳ್ಯ:ರೋಟರಿ ಕ್ಲಬ್ನ ಸದಸ್ಯರಾದವರು ತಮ್ಮ ಸಾಮರ್ಥ್ಯವನ್ನು ಸಮಾಜದ ಅಭಿವೃದ್ಧಿಗೆ ವಿನಿಯೋಗಿಸಬೇಕು. ಸಾಧ್ಯವಾದಷ್ಟು ಪ್ರೀತಿ, ವಿಶ್ವಾಸ ಪ್ರೇಮವನ್ನು ನೀಡಿ ಜನರಲ್ಲಿ ಮತ್ತು ಸಮಾಜದಲ್ಲಿ ಆಶಾಭಾವನೆಯನ್ನು ತುಂಬಬೇಕು ಎಂದು ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಹೇಳಿದರು. ರೋಟರಿ ಕ್ಲಬ್ ಸುಳ್ಯ ಸಿಟಿ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ರೋಟರಿ ಸಂಸ್ಥೆಯಲ್ಲಿ ಸೇರಿದಾಗ ವಿಶಾಲವಾದ
ದೃಷ್ಠಿಕೋನ ಬೆಳೆಯುತ್ತದೆ. ಅಧ್ಯಕ್ಷತೆ ಹಾಗೂ ಹುದ್ದೆಗಳು ದೊಡ್ಡ ಜವಾಬ್ದಾರಿ. ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಸದಾ ಕೊಡೆಯಂತೆ ಅರಳಿ ಸೇವೆ ನೀಡುತ್ತಿರಬೇಕು ಎಂದು ಹೇಳಿದರು. ನದಿ ಹರಿಯುವಂತೆ ಕಾಲಚಕ್ರ, ಜೀವನ ಓಡುತ್ತದೆ. ತೊರೆಗಳು ಸೇರಿ ಒಟ್ಟಾಗಿ ನದಿ ಹರಿಯುವಂತೆ ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡುವಾಗ ಸಿಗುವ ಖುಷಿ, ಸಂಭ್ರಮ ಅತ್ಯಂತ ದೊಡ್ಡದು ಎಂದು ಅವರು ಹೇಳಿದರು.

ಡಾ.ಶಂಕರ ಭಟ್ ಅವರಿಗೆ ಸನ್ಮಾನ
ರೋಟರಿ ಕ್ಲಬ್ ಸುಳ್ಯ ಸಿಟಿಯ ನೂತನ ಅಧ್ಯಕ್ಷ ಗಿರೀಶ್ ನಾರ್ಕೋಡು, ಕಾರ್ಯದರ್ಶಿ ಚೇತನ್ ಪಿ.ಎನ್, ಕೋಶಾಧಿಕಾರಿ ಹೇಮಂತ್ ಕಾಮತ್ ಇವರ ನೇತೃತ್ವದ ತಂಡ ಅಧಿಕಾರ ವಹಿಸಿದರು. ರೋಟರಿ ಕ್ಲಬ್ ಸುಳ್ಯ ಸಿಟಿ ನಿರ್ಗಮನ ಅಧ್ಯಕ್ಷ ಪಿ.ಮುರಳೀಧರ ರೈ ಅಧಿಕಾರ ಹಸ್ತಾಂತರಿಸಿದರು. ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ನೆರವೇರಿಸಿದರು.

ಲೋಕೇಶ್ ಊರುಬೈಲು ಅವರಿಗೆ ಸನ್ಮಾನ
ಮುಖ್ಯ ಅತಿಥಿಗಳಾಗಿ ವಲಯ 5 ರ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ, ವಲಯ 5ರ ಝೋನಲ್ ಲೆಫ್ಟಿನೆಂಟ್ ಸುಜಿತ್ ಪಿ.ಕೆ., ಗವರ್ನರ್ ವಿಶೇಷ ಪ್ರತಿನಿಧಿ ಡಾ.ಕೇಶವ ಪಿ.ಕೆ., ಐಪಿಪಿ ಪ್ರೀತಮ್ ಡಿ.ಕೆ., ಕಾರ್ಯದರ್ಶಿ ಚೇತನ್ ಪಿ.ಎನ್., ಖಜಾಂಜಿ ಹೇಮಂತ್ ಕಾಮತ್, ಇನ್ನರ್ ಕ್ಲಬ್ ಅಧ್ಯಕ್ಷೆ ಸವಿತಾ ನಾರ್ಕೋಡು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸನ್ಮಾನ : ಸಮಾರಂಭದಲ್ಲಿ ಸುಳ್ಯದ ಹಿರಿಯ ವೈದ್ಯರಾದ ಡ.ಶಂಕರ್ ಭಟ್ ಹಾಗೂ ರಂಗಮಯೂರಿ ನಿರ್ದೇಶಕ ಲೋಕೇಶ್ ಊರುಬೈಲು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಾರ್ಕೋಡು ಶಾಲೆಗೆ ಅಭಿವೃದ್ಧಿಗೆ ಸಹಾಯಧನ, ನಾಗಪಟ್ಟಣ ಶಾಲೆಗೆ ಟೇಬಲ್ ಮತ್ತು ಚೆಯರ್, ಕಾಯರ್ತೋಡಿ ಅಂಗನವಾಡಿಗೆ ಕೊಡುಗೆ ಹಸ್ತಾಂತರಿಸಲಾಯಿತು.