ಸುಳ್ಯ: ಕೆವಿಜಿ ದಂತ ಮಹಾವಿದ್ಯಾಲಯದ ಪರಿದಂತಶಾಸ್ತ್ರ ವಿಭಾಗ ಹಾಗು ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ‘ತ್ಯಾಜ್ಯ ನಿರ್ವಹಣೆ’ ಕುರಿತು ತರಬೇತಿ ಕಾರ್ಯಕ್ರಮ ಹಾಗು ಸ್ವಚ್ಛತಾ ಅಭಿಯಾನ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸುಳ್ಯದ ವಿವೇಕಾನಂದ ವೃತ್ತದಿಂದ ಕೆವಿಜಿ ದಂತ ಮಹಾವಿದ್ಯಾಲಯದವರೆಗೆ ಸ್ವಚ್ಛತಾ ಹಾಗೂ
ತ್ಯಾಜ್ಯ ಸಂಗ್ರಹ ಅಭಿಯಾನ ನಡೆಯಿತು. ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿ ಸಾರ್ವಜನಿಕರಲ್ಲಿ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಕಮಿಟಿ ‘ಬಿ’ ಎ.ಓ.ಎಲ್.ಇ ಇದರ ಅಧ್ಯಕ್ಷರು ಡಾ. ರೇಣುಕಾಪ್ರಸಾದ್ ಕೆ.ವಿ, ಶಾಸಕಿ ಭಾಗೀರಥಿ ಮುರುಳ್ಯ, ಪ್ರಾಂಶುಪಾಲೆ ಡಾ. ಮೋಕ್ಷ ನಾಯಕ್, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ್ ಲಸ್ರಾದೊ , ಕೆವಿಜಿ ದಂತ ಮಹಾವಿದ್ಯಾಲಯದ ಪರಿದಂತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ.ಎಂ. ದಯಾಕರ್ ಉಪಸ್ಥಿತರಿದ್ದರು. ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಲಾಯಿತು. ಬಳಿಕ

ದಂತ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ
ಪರಿಸರ ಸಂರಕ್ಷಣೆ, ತ್ಯಾಜ್ಯ ವಿಂಗಡಣೆ ಹಾಗೂ ಜೈವ ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಕುರಿತು ಮಾಹಿತಿ ನೀಡಲಾಯಿತು.
ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಚಂದ್ರಶೇಖರ್ ಅವರು ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಜಾಗೃತಿ ಕುರಿತು ವಿಶೇಷ ಉಪನ್ಯಾಸ ನೀಡಿದರು, ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ್ ಲಸ್ರಾದೊ ಅವರು ಸಾಮಾಜಿಕ ಹೊಣೆಗಾರಿಕೆ ಮತ್ತು ಸ್ವಚ್ಛತಾ ಚಳವಳಿಯಲ್ಲಿ ಯುವಜನರ ಪಾತ್ರದ ಕುರಿತು ಉಪನ್ಯಾಸ ನೀಡಿದರು.
ಕೆವಿಜಿ ದಂತ ಮಹಾ ವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮೌರ್ಯ ಆರ್. ಕುರುಂಜಿ, ತಹಶೀಲ್ದಾರ್ ಮಂಜುಳಾ ಎಂ, ಪ್ರಾಂಶುಪಾಲೆ ಡಾ. ಮೋಕ್ಷ ನಾಯಕ್ ಹಾಗೂ ಪರಿದಂತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ.ಎಂ. ದಯಾಕರ್, ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಸಂತೋಷ್ ಜಾಕೆ ಉಪಸ್ಥಿತರಿದ್ದರು.
ಡಾ. ಅನನ್ಯ ಪ್ರಾರ್ಥನೆ ಹಾ ಡಿದರು. ಡಾ. ಅರುಂಧತಿ ಸ್ವಾಗತಿಸಿದರು, ಡಾ. ಶಿಲ್ಪಾ ಅತಿಥಿಗಳನ್ನು ಪರಿಚಯಿಸಿದರು. ಡಾ. ಸ್ವಸ್ತಿಕ್ ವಂದಿಸಿದರು. ಡಾ. ಸುರಭಿ, ಡಾ. ಸರ್ಜಾ ಐಶ್ವರ್ಯ ಹಾಗೂ ಡಾ. ಯತೀಶ್ ಎಂ ನಿರೂಪಿಸಿದರು.







