ಸುಳ್ಯ:ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಪ್ರತಿಭಟನಾ ಸಭೆ ನಡೆಯಿತು.ಮಲೆನಾಡು ಜನಹಿತರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಕಿಶೋರ್ ಶಿರಾಡಿ, ಪ್ರಮುಖರಾದ
ಎಸ್.ಎನ್.ಮನ್ಮಥ, ಪಿ.ಸಿ.ಜಯರಾಮ,ಪಿ.ಬಿ. ಪ್ರಭಾಕರ ರೈ,ಚಂದ್ರ ಕೋಲ್ಚಾರ್,ಎಂ.ವೆಂಕಪ್ಪ ಗೌಡ, ಸಂತೋಷ್ ಕುತ್ತಮೊಟ್ಟೆ, ನಿಹಾಲ್ ಕೋಡ್ತುಗುಳಿ, ಕವನ, ಮೋಕ್ಷ ಮತ್ತಿತರರು ಮಾತನಾಡಿದರು. ಪ್ರಮುಖರಾದ

ಹರೀಶ್ ಕಂಜಿಪಿಲಿ, ವಿನಯಕುಮಾರ್ ಕಂದಡ್ಕ, ಜಯರಾಮ ಹಾಡಿಕಲ್ಲು, ಎ.ಟಿ.ಕುಸುಮಾಧರ, ಸುರೇಶ್.ಎಂ.ಎಚ್, ಸೋಮಶೇಖರ ಪೈಕ, ರಮಾನಂದ ಎಣ್ಣೆಮಜಲು, ಸತೀಶ್ ಎಡಮಲೆ, ಜಯಪ್ರಕಾಶ್ ಕೂಜುಗೋಡು, ಬಾಲಕೃಷ್ಣ ಕೀಲಾಡಿ, ಕೇಶವ ಅಡ್ತಲೆ, ಮಾಧವ ಭಟ್ ಶೃಂಗೇರಿ, ಸುಧಾಕರ ತೊಡಿಕಾನ, ರಾಜೇಶ್ ಭಟ್ ನೆಕ್ಕಿಲ, ಮಿಲನ್ ಬಾಲಿಕಳ, ದಯಾನಂದ ಕುರುಂಜಿ ಮತ್ತಿತರರು ಉಪಸ್ಥಿತರಿದ್ದರು.
ವೇದಿಕೆಯ ಪ್ರಮುಖರಾದ ಭುವನೇಂದ್ರದಾಸ್ ಉಬರಡ್ಕ ಸ್ವಾಗತಿಸಿ, ಅಶೋಕ್ ಪೀಚೆ ವಂದಿಸಿದರು. ವನಿತ ಮೀನಗದ್ದೆ ಮತ್ತು ದುಷ್ಯಂತ ಶೀರಡ್ಕ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.







