ಸುಳ್ಯ:ಸುಳ್ಯದ ರಂಗಮಯೂರಿ ಕಲಾಶಾಲೆ, ಪ್ರಣವ ಸೌಹಾರ್ದ ಸಹಕಾರಿ ಸಂಘ, ಮತ್ತು ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಕಸಿತ ಭಾರತದ ಕಡೆ ಮಕ್ಕಳ ನಡೆ ಎಂಬ ಧೈಯದೊಂದಿಗೆ ಸುಳ್ಯದಲ್ಲಿ ಪ್ರಥಮ ಬಾರಿಗೆ ಸಂಕಲ್ಪ ಮಕ್ಕಳ ಹಬ್ಬ – 2026 ನಾಳೆಯಿಂದ ಅಂದರೆ ಅ.9ರಿಂದ 11ರವರೆಗೆ ಮೂರು ದಿನಗಳ ಕಾಲ
ಸುಳ್ಯದ ಅಮರಶ್ರೀಭಾಗ್ನ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯಲಿದೆ. ಸುಳ್ಯ ತಾಲೂಕು ಹಾಗೂ ಸುಳ್ಯ ತಾಲೂಕಿಗೆ ಹೊಂದಿಕೊಂಡಿರುವ ಗಡಿ ಗ್ರಾಮಗಳ ಎಲ್ಲಾ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಕಾರ್ಯಕ್ರಮ ಆಯೋಜನೆ ಮಾಡುವ ಉದ್ದೇಶದಿಂದ ಮಕ್ಕಳ ಹಬ್ಬ ಆಯೋಜನೆಗೊಂಡಿದ್ದು ಎಲ್ಲಾ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಮುಕ್ತ ಅವಕಾಶ ಒದಗಿಸಲಾಗುವುದು.
ಕಾರ್ಯಕ್ರಮದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆ ಮತ್ತು ವರ್ತಮಾನಕ್ಕೆ ಅನುಗುಣವಾಗಿ ನಾಡಿನ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳ ಮೂಲಕ ಗುಣ ಮಟ್ಟದ ವಿಚಾರ ಸಂಕೀರ್ಣ, ಮಾರ್ಗದರ್ಶನ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ – ಸಾಹಿತ್ಯ ಸ್ಪರ್ಧೆಗಳು, ವೇದಿಕೆ ಪ್ರದರ್ಶನಗಳು, ವಿಚಾರ ಗೋಷ್ಠಿಗಳು ನಡೆಯಲಿದೆ. ಮನೆಗೊಂದು ಗಿಡ ಪರಿಸರ ಜಾಗೃತಿ, ಮಕ್ಕಳ ಆರೋಗ್ಯಕರ ಆಹಾರ ಮೇಳ, ಪುಸ್ತಕ ಮೇಳ, ಹೂ – ಹಣ್ಣಿನ ಗಿಡಗಳ ಮಾರಾಟ ಮಳಿಗೆ, ಆರೋಗ್ಯ ತಪಾಸಣಾ ಶಿಬಿರ, ಮಕ್ಕಳ ಆಧಾರ್ ತಿದ್ದುಪಡಿ ಮತ್ತು ನೋಂದಣಿ, ಉಳಿತಾಯ ಜಾಗೃತಿಗಾಗಿ ಬ್ಯಾಂಕಿಂಗ್ ಸೇವಾ ಮಾಹಿತಿ, ಮಾವು, ಹಲಸು, ಅನನಾಸು ಹಣ್ಣಿನ ಹೋಳಿಗೆ ಸ್ಥಳದಲ್ಲೇ ತಯಾರಿ, ಪೋಷಕರಿಗಾಗಿ ವಿನೂತನ ಮಾಹಿತಿ ಕಾರ್ಯಾಗಾರ ಮಾತೃ ಸಂಗಮ ನಡೆಯಲಿದೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ವೇದಿಕೆಯಲ್ಲಿ ನಡೆಯಲಿದೆ. ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಆಧುನಿಕ ತಾರಾಲಯ ಪ್ರದರ್ಶನಗಳು, ಕೃತಕ ಬುದ್ದಿಮತ್ತೆಯ ಯಾಂತ್ರಿಕ ಮಾನವ ಮತ್ತು ಶ್ವಾನ ಚಟುವಟಿಕೆಗಳು, ವರ್ಚುವಲ್ ರಿಯಾಲಿಟಿ ಶೋ ಜೊತೆಗೆ ಪಾರಂಪರಿಕ ವಸ್ತುಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ.
ಮೂರು ದಿನಗಳ ಕಾರ್ಯಕ್ರಮದಲ್ಲಿ ಎಲ್ಕೆಜಿಯಿಂದ ದ್ವಿತೀಯ
ಪಿಯುಸಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು ಜೊತೆಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ. 3 ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿ ಅಂದಾಜು 10ರಿಂದ 12ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕಾರ್ಯಕ್ರಮದ ಸಂಯೋಜಕರು ಹಾಗು ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ತಿಳಿಸಿದ್ದಾರೆ.
ಅ.9ರಂದು ಪೂ.10.30ಕ್ಕೆ ನಡೆಯುವ ಸಮಾರಂಭದಲ್ಲಿ ಖ್ಯಾತ ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಮಕ್ಕಳ ಹಬ್ಬವನ್ನು ಉದ್ಘಾಟಿಸುವರು. ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ.ಯು.ಪಿ.ಶಿವಾನಂದ ಅಧ್ಯಕ್ಷತೆ ವಹಿಸುವರು. ಅ.11ರಂದು ಸಂಜೆ.4.30ರಿಂದ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್.ಪ್ರಸಾದ್ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಫರೀದ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ, ಶಾಸಕಿ ಭಾಗೀರಥಿ ಮುರುಳ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಡಾ.ಕೆ.ವಿ.ಚಿದಾನಂದ, ಎಸ್.ಆರ್.ಸತೀಶ್ಚಂದ್ರ ಮತ್ತಿತರರು ಭಾಗವಹಿಸಲಿದ್ದಾರೆ.
ವಿಚಾರಗೋಷ್ಠಿ:
ಅ.9ರಂದು ಬೆಳಿಗ್ಗೆ 11.45ರಿಂದ 12.45ರವರೆಗೆ ಪರಿಸರ ಜಾಗೃತಿ ಮತ್ತು ನಿರ್ವಹಣೆಯ ವಿಷಯದ ಕುರಿತು ನಡೆಯುವ ವಿಚಾರಗೋಷ್ಠಿ ನಡೆಯಲಿದೆ.ಅಪರಾಹ್ನ 1 ರಿಂದ 1.45ರವರೆಗೆ ಮಕ್ಕಳ ಸಾಮಾಜಿಕ ಜವಾಬ್ದಾರಿ ಹಾಗೂ ಮಾಧ್ಯಮಗಳ ಬಳಕೆ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದೆ.ಪೋಷಕರಿಗಾಗಿ ವಿನೂತನ ಕಾರ್ಯಗಾರ ಮಾತೃ ಸಂಗಮ ಮಾಲಿಕೆಯಡಿ ವ್ಯಸ್ಥ ಜೀವನಸ್ವಸ್ಥ ಭೋಜನ ವಿಷಯದ ಕುರಿತು ವಿಚಾರಗೋಷ್ಠಿಯಲ್ಲಿ ಆರೋಗ್ಯಕರ ಆಹಾರ ಹಾಗೂ ತಿಂಡಿಗಳ ತಯಾರಿ ಬಗ್ಗೆ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ.
ಅ.10 ರಂದು ಬೆಳಿಗ್ಗೆ 10.45ರಿಂದ 11.30ರವರೆಗೆ ಸರಕಾರಿ ಆಡಳಿತ ಹುದ್ದೆಗಳ ಮಾಹಿತಿ,ಅಗತ್ಯತೆ ಮತ್ತು ಅವಶ್ಯಕತೆ ವಿಷಯದ ಕುರಿತು ವಿಚಾರಗೋಷ್ಠಿ, 11.45ರಿಂದ 12.45ರವರೆಗೆ ಮಕ್ಕಳ ಬೆಳವಣಿಗೆಯಲ್ಲಿ ಶಾಲೆ ಮತ್ತು ಮನೆಯ ವಾತಾವರಣ ವಿಷಯದ ವಿಚಾರಗೋಷ್ಠಿ,
ಮಧ್ಯಾಹ್ನ 1ರಿಂದ 1.45ರವರೆಗೆ ಮಕ್ಕಳ ಹಕ್ಕುಗಳು ಹಾಗೂ ಕಾನೂನು ಅರಿವು ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದೆ.
ಸಂಜೆ 4.00ರಿಂದ 5.30 ರವರೆಗೆ ಮಾತೃ ಸಂಗಮ, ವಿದ್ಯಾರ್ಥಿ ಚರ್ಚಾ ಗೋಷ್ಠಿ ನಡೆಯಲಿದ್ದು, ಎ.ಐ. . ತಂತ್ರಜ್ಞಾನ ಸಮಾಜ ಮತ್ತು ಸಂಸ್ಕೃತಿಗೆ ಪೂರಕವೇ ಅಥವಾ ಪ್ರ ಮಾರಕವೇ ಎಂಬ ವಿಷಯದ ಕುರಿತು ಚರ್ಚೆ ನಡೆಯಲಿದೆ. ಅ.11ರಂದು ಬೆಳಿಗ್ಗೆ 10.30ರಿಂದ 11.15ರವರೆಗೆ ಮಕ್ಕಳ ಮಾತೃಭಾಷಾ ಮಾಲಿಕೆಯಲ್ಲಿ ಅರೆಭಾಷೆ ಎಂಬ ವಿಷಯದ ಕುರಿತು ಅರೆಭಾಷೆ ಕಲಿಕೆ ಮತ್ತು ಮಹತ್ವ ವಿಷಯದ ವಿಚಾರಗೋಷ್ಠಿ,11.30ರಿಂದ 12.30ರವರೆಗೆ ಸಾಮಾಜಿಕ ಕಾಳಜಿ ಮತ್ತು ಸಾಂಸ್ಕೃತಿಕ ಶಿಕ್ಷಣದ ಮಹತ್ವ ವಿಷಯದ ವಿಚಾರಗೋಷ್ಠಿ ಮಧ್ಯಾಹ್ನ 12.45ರಿಂದ 1.30ರವರೆಗೆ ಮಕ್ಕಳ ಮಾತೃಭಾಷಾ ಮಾಲಿಕೆಯಲ್ಲಿ ತುಳು ಎಂಬ ವಿಷಯದಲ್ಲಿ ತುಳು ಭಾಷಾ ಕಲಿಕೆ ಮತ್ತು ಮಹತ್ವ ವಿಚಾರಗೋಷ್ಠಿ, ಮಧ್ಯಾಹ್ನ 2ರಿಂದ 3.30ರವರೆಗೆ ಪೋಷಕರಿಗಾಗಿ ಮಕ್ಕಳ ಕೈಬರಹ ಮತ್ತು ವ್ಯಕ್ತಿತ್ವ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದೆ.
ಗುಂಪುಗಾಯನ ಸ್ಪರ್ಧೆ ಮತ್ತು ನೃತ್ಯ ಸ್ಪರ್ಧೆ:
ಅ.9ರಂದು ಬೆಳಿಗ್ಗೆ 9ರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗುಂಪು ಗಾಯನ ಸ್ಪರ್ಧೆ ನಡೆಯಲಿದೆ. ಅಪರಾಹ್ನ 2ರಿಂದ ಅರೆಭಾಷೆ ಹಾಡಿಗೆ ನೃತ್ಯ ಸ್ಪರ್ಧೆ ನಡೆಯಲಿದೆ. ಅ. 10ರಂದು ಬೆಳಿಗ್ಗೆ 9ರಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗುಂಪು ನೃತ್ಯ ಸ್ಪರ್ಧೆ ನಡೆಯಲಿದ್ದು, ಅಪರಾಹ್ನ 2ರಿಂದ ತುಳು ಹಾಡಿಗೆ ಗುಂಪು ನೃತ್ಯ ಸ್ಪರ್ಧೆ ನ ನಡೆಯಲಿದೆ. ಆ. 11ರಂದು ಪೂರ್ವಾಹ್ನ 9ರಿಂದ ಪದವಿಪೂರ್ವ ವಿದ್ಯಾರ್ಥಿಗಳ ಗುಂಪು ನೃತ್ಯ ಸ್ಪರ್ಧೆ – ನಡೆಯಲಿದೆ.
ಸಾಂಸ್ಕೃತಿಕ ಸಂಭ್ರಮದಲ್ಲಿ ರಂಗಮಯೂರಿ ಕಲಾಶಾಲೆ, ಸುಳ್ಯ, ಗಾನ ನೃತ್ಯ ಅಕಾಡೆಮಿ ಮಂಗಳೂರು ಮತ್ತು ಸುಳ್ಯ, ಡಿ ಯುನೈಟೆಡ್ ಡಾನ್ಸ್ ಸ್ಟುಡಿಯೋ ಸುಳ್ಯ, 2 ಘಿಖಿಂಖಜ ಡ್ಯಾನ್ಸ್ ಕ್ರೀವ್ ಸುಳ್ಯ, ಮಂಜು ಬ್ರದರ್ಸ್ ಸುಳ್ಯ, ದ ನಟರಾಜ ನೃತ್ಯನಿಕೇತನ ಸುಳ್ಯ, ಪ್ಯೂಷನ್ ಇನ್ಸಿಟ್ಯೂಟ್ ಆಫ್ ಡಾನ್ಸ್ ಸುಳ್ಯ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಆ ಸುಳ್ಯ ತಂಡಗಳು ಭಾಗವಹಿಸಲಿವೆ. ಅ.11ರಂದು ಅಪರಾಹ್ನ 7 3.45ರಿಂದ ಸುಪ್ರಜಾ ರಾವ್ ಪುತ್ತೂರು ಮತ್ತು ತಂಡದವರಿಂದ ವಯೋಲಿನ್ ವಾದನ ನಡೆಯಲಿದೆ.







