ಸುಳ್ಯ: ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ವತಿಯಿಂದ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನಾ ಸಭೆ ಜ.18ರಂದು ಸುಳ್ಯ ವಲಯ ಅರಣ್ಯ ಇಲಾಖೆ ಕಛೇರಿ ಬಳಿ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಕಿಶೋರ್ ಶಿರಾಡಿ’ ಇದು ರೈತರ ಬದುಕಿಗಾಗಿನ ಹೋರಾಟ ಎಂದು ಹೇಳಿದರು. ವಿವಿಧ ಕಾನೂನುಗಳನ್ನು ತರುವ ಮೂಲಕ ರೈತರ ಮೌಲ್ಯಾಧಾರಿತ ಬದುಕನ್ನು
ಕಸಿಯುವ ಹುನ್ನಾರ ನಡೆಯುತಿದೆ. ಇದರ ವಿರುದ್ಧ ಜಾಗೃತಿ, ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು. ಪರಿಭಾವಿತ ಅರಣ್ಯದಡಿಯಲ್ಲಿ ಸೇರಿಸಿರುವ ಕಂದಾಯ ಸರ್ವೆ ನಂಬ್ರಗಳನ್ನು ಪುನರ್ ಪರಿಶೀಲನೆ ಮಾಡಿ ಅದನ್ನು ಕಂದಾಯ ಭೂಮಿ ಎಂದು ಪರಿಗಣಿಸಬೇಕು. ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿಗುರುತು ಆಗಬೇಕು ಎಂದು ಅವರು ಒತ್ತಾಯಿಸಿದರು.
ವೇದಿಕೆಯ

ಸುಳ್ಯ ತಾಲೂಕು ಸಂಚಾಲಕ ಚಂದ್ರಶೇಖರ ಬಾಳುಗೋಡು ಮಾತನಾಡಿ ಪಶ್ಚಿಮ ಘಟ್ಟಕ್ಕೆ ಸಂಬಂಧಪಟ್ಟಂತೆ ಪರಿಸರ ಸಂರಕ್ಷಣೆಯ ತಜ್ಞರ ವರದಿ ತಯಾರಿಸುವಾಗ ಪಶ್ಚಿಮ ಘಟ್ಟ ಪ್ರದೇಶದ ಗ್ರಾ.ಪಂ.ಗಳಲ್ಲಿ ವ್ಯಾಪಾಕ ಪ್ರಚಾರ ನಡೆಸಿ ವಿಶೇಷ ಗ್ರಾಮ ಸಭೆ ಕರೆದು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಹೇಳಿದರು. ಪ್ರಮುಖರಾದ
ಜಯಪ್ರಕಾಶ್ ಕೂಜುಗೋಡು,
ಹರಿಪ್ರಸಾದ್ ಪಾನತ್ತಿಲ, ತೀರ್ಥರಾಮ ನೆಡ್ಚಿಲ್, ಎ.ಜಿ.ಕರುಣಾಕರ, ಪಿ.ಎಸ್.ಗಂಗಾಧರ, ಸುರೇಶ್ ಎಂ.ಎಚ್, ಸಯ್ಯದ್ ಮೀರಾ ಸಾಹೇಬ್, ಪುರುಷೋತ್ತಮ ಕೋಲ್ಚಾರ್, ಜಯಪ್ರಕಾಶ್ ಕೂಜುಗೋಡು, ಅಶೋಕ್ ಪೀಚೆ, ಚಿತ್ರಾ ಕುಮಾರಿ, ಅನಿಲ್ ಕೆ.ಸಿ. ಪರಿವಾರಕಾನ, ಮತ್ತಿತರರು ಉಪಸ್ಥಿತರಿದ್ದರು.