ಸುಳ್ಯ:ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.ಹಿರಿಯ ಸಾಹಿತಿಗಳು, ನಿವೃತ್ತ ಶಿಕ್ಷಕರಾದ ಜಯಮ್ಮ ಚಟ್ಟಿಮಾಡ ಅವರನ್ನು ಅವರ ನಿವಾಸದಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ನೇತೃತ್ವದಲ್ಲಿ
ಗೌರವಿಸಲಾಯಿತು.ಹಿರಿಯ ಸಾಹಿತಿಗಳು ನಿವೃತ್ತ ಶಿಕ್ಷಕರಾದ ಶೀಲಾವತಿ ಕೊಳಂಬೆ ಇವರನ್ನು ಅವರ ನಿವಾಸ ಚೊಕ್ಕಾಡಿಯಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪಂಜ ಹೋಬಳಿ ಘಟಕದ ವತ್ತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು, ಗೌರವ ಕಾರ್ಯದರ್ಶಿ ಗಳಾದ ತೇಜಸ್ವಿ ಕಡಪಳ, ಚಂದ್ರಮತಿ ಕೆ., ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರೊ. ಸಂಜೀವ ಕುದ್ಪಾಜೆ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಕೇಶವ ಸಿ.ಎ, ಸಂಕೀರ್ಣ ಚೊಕ್ಕಾಡಿ, ಪಂಜ ಹೋಬಳಿ ಘಟಕದ ಅಧ್ಯಕ್ಷ ರಾದ ಬಾಬು ಗೌಡ ಅಚ್ರಪ್ಪಾಡಿ, ಕಾರ್ಯದರ್ಶಿ ರೂಪಾವಾಣಿ ಮತ್ತಿತರರು ಉಪಸ್ಥಿತರಿದ್ದರು.