ಮಂಗಳೂರು:ನಗರದಲ್ಲಿ ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ಸಂಜೆ ಮಂಗಳೂರಿಗೆ ಆಗಮಿಸಿರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕರಾವಳಿ ತೀರ ಪ್ರದೇಶವನ್ನು ಸರಿಯಾಗಿ ಬಳಸಿಕೊಂಡು ಅಭಿವೃದ್ಧಿ ಮಾಡಬೇಕಾಗಿದೆ. ಜಿಲ್ಲೆಯ ಜನರಿಗೆ
ಶಕ್ತಿ ತುಂಬಲು, ಇಲ್ಲೇ ಸಂಪುಟ ಸಭೆ ಸಭೆ ನಡೆಸುತ್ತಿದ್ದೇವೆ. ಇದರಿಂದ ಕರಾವಳಿ ಮತ್ತು ಮಲೆನಾಡಿಗೆ ಹೊಸ ರೂಪ ಸಿಗಲಿದೆ ಎಂದು ಹೇಳಿದರು. ಸಂಪುಟ ಸಭೆಯಲ್ಲಿ ಇಲ್ಲಿನ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ಕಸ್ತೂರಿರಂಗನ್ ವರದಿಯನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಹಿಂದೆಯೇ ತಿರಸ್ಕರಿಸಿತ್ತು. ಆದರೂ ಅದರ ಕರಡು ಅಧಿಸೂಚನೆಗೆ ಇದೇ 26ರ ಒಳಗೆ ಆಕ್ಷೇಪಣೆ ಸಲ್ಲಿಸಬೇಕಿದೆ. ಅದಕ್ಕಾಗಿ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆದಿದ್ದೇವೆ. ಸೋಮವಾರ ಈ ಬಗ್ಗೆ ಚರ್ಚಿಸುತ್ತೇವೆ, ಎಲ್ಲ ಶಾಸಕರಿಗೂ ಅಭಿಪ್ರಾಯ ಮಂಡನೆಗೆ ಅವಕಾಶ ನೀಡುತ್ತೇವೆ’ ಎಂದರು.
ರೈತರ ಸಮಸ್ಯೆ ಹಾಗೂ ಬರಗಾಲದ ಸಮಸ್ಯೆ ಬಗ್ಗೆಯೂ ವಿಶೇಷ ಅಧಿವೇಶನದ ಎರಡನೇ ದಿನ ಚರ್ಚಿಸಲಿದ್ದೇವೆ’ ಎಂದರು. ಸಚಿವ ಸಂಪುಟ ಸಭೆಗಾಗಿ ಡಿಸಿಎಂ ಪರಮೇಶ್ವರ್ ಹಾಗು ವಿವಿಧ ಇಲಾಖೆಯ ಸಚಿವರುಗಳು ಜಿಲ್ಲೆಗೆ ಆಗಮಿಸಿದರು.








