ಕೊಚ್ಚಿ:ಮಮಿತಾ ಬೈಜು, ನಿವಿನ್ ಪೌಲಿ ನಟನೆಯ ‘ಬೆತ್ಲಹೆಮ್ ಕುಟುಂಬ ಯುನಿಟ್’ 300 ಕೋಟಿಗೂ ಅಧಿಕ ಮೊತ್ತದ ಗಳಿಕೆಯ ಮೂಲಕ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ದಾಖಲೆ ಬರೆದಿದೆ. ಸಿನಿಮಾ ಬಿಡುಗಡೆಯಾದ 25 ದಿನಗಳಲ್ಲೇ ದಾಖಲೆ ಬರೆದಿದೆ. ಚಿತ್ರವು ಬಾಕ್ಸ್ ಆಫೀಸ್ನಲ್ಲಿ
310 ಕೋಟಿಗೂ ಅಧಿಕ ಹಣ ಗಳಿಸಿದೆ. ಕೇರಳದಲ್ಲಿ ಅತ್ಯಧಿಕ ಗಳಿಕೆ ಮಾಡಿದ ಮೊದಲ ಸಿನಿಮಾವಾಗಿ ಈ ಚಿತ್ರವು ಗುರುತಿಸಿಕೊಂಡಿದೆ.
ಆಗಸ್ಟ್ 21ರಂದು ಓಣಂ ಹಬ್ಬದ ಸಂದರ್ಭ ತೆರೆಕಂಡಿದ್ದ ಈ ಸಿನಿಮಾದ ಗೆಲುವಿನಲ್ಲಿ ಪ್ರೇಕ್ಷಕರ ಅನಿಸಿಕೆ, ಅಭಿಪ್ರಾಯಗಳೇ ಪ್ರಮುಖ ಪಾತ್ರ ವಹಿಸಿತ್ತು. ಗಿರೀಶ್ ಎ.ಡಿ. ನಿರ್ದೇಶನದ ಈ ಸಿನಿಮಾ 2025ರಲ್ಲಿ ತೆರೆಕಂಡ ದುಲ್ಕರ್ ಸಲ್ಮಾನ್ ನಿರ್ಮಾಣದ ಕಲ್ಯಾಣಿ ಪ್ರಿಯದರ್ಶನ್ ಅಭಿನಯದ ‘ಲೋಕಾ: ಚಾಪ್ಟರ್ 1’ ಗಳಿಕೆಯನ್ನು ಹಿಂದಿಕ್ಕಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 301 ಕೋಟಿ ಗಳಿಕೆ ಮಾಡಿತ್ತು. ಭಾರತದಲ್ಲಷ್ಟೇ
ಅಲ್ಲದೆ ಹೊರ ದೇಶಗಳಲ್ಲೂ ನಿವಿನ್ ಪೌಲಿ ಸಿನಿಮಾ ಮೋಡಿ ಮಾಡಿದೆ. ಯುಕೆ, ಅಮೆರಿಕದಲ್ಲೂ ಈ ಸಿನಿಮಾ ಗಳಿಕೆಯಲ್ಲಿ ದಾಖಲೆ ಬರೆದಿದೆ.ಮಲಯಾಳದಲ್ಲಷ್ಟೇ ತೆರೆಕಂಡ ‘ಬೆತ್ಲೆಹೆಮ್ ಕುಟುಂಬ ಯುನಿಟ್’ ಚಿತ್ರವು ಬಳಿಕ ತೆಲುಗು, ತಮಿಳಿನಲ್ಲಿ ಡಬ್ ಆಗಿ ತೆರೆಕಂಡಿತ್ತು.ಈ ಸಿನಿಮಾದಲ್ಲಿ ನಿವಿನ್ ಪೌಲಿ ಮತ್ತು ಮಮಿತಾ ಬೈಜು ಜೋಡಿಗೆ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ. ನಾಲ್ಕು ವಾರಗಳಿಂದಲೂ ಹೌಸ್ ಫುಲ್ ಆಗಿರುವ ಸಿನಿಮಾ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನಡೆದಿದೆ.











