ಭಾಗಮಂಡಲ: ತಲಕಾವೇರಿಯಲ್ಲಿ ಅ. 17ರಂದು ರಾತ್ರಿ 7.50ಕ್ಕೆ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಘವ ನಡೆಯಲಿದೆ.
ತೀರ್ಥೋದ್ಘವ ಮೇಷ ಲಗ್ನದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಭಾಗಮಂಡಲದ ಭಗಂಡೇಶ್ವರ ದೇಗುಲದಲ್ಲಿ ಸೆ. 27ರಂದು ಬೆಳಿಗ್ಗೆ
8.45ಕ್ಕೆ ಪತ್ತಾಯಕ್ಕೆ ಅಕ್ಕಿ ಹಾಕುವುದು, ಅ. 5ರಂದು ಬೆಳಿಗ್ಗೆ 10.35ಕ್ಕೆ ಆಜ್ಞಾ ಮುಹೂರ್ತ, ಅ. 15ರಂದು ಮಧ್ಯಾಹ್ನ 12.35ಕ್ಕೆ ಅಕ್ಷಯ ಪಾತ್ರೆ , ಸಂಜೆ 6.03ಕ್ಕೆ ಕಾಣಿಕೆ ಡಬ್ಬಿ ಇಡುವ ಕಾರ್ಯಗಳು ನಡೆಯಲಿವೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಗೆ ಸೇರಿದ ಭಗಂಡೇಶ್ವರ– ತಲಕಾವೇರಿ ದೇವಾಲಯದ ಪ್ರಕಟಣೆ ತಿಳಿಸಿದೆ.ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ–2026ರ ಜಾತ್ರೆಯ ಪ್ರಯುಕ್ತಶಾಸಕ ಎ.ಎಸ್. ಪೊನ್ನಣ್ಣ ಅಧ್ಯಕ್ಷತೆಯಲಿ ಭಾಗಮಂಡಲದಲ್ಲಿ ಸಭೆ ನಡೆಯಿತು.











