ನವದೆಹಲಿ:ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಅಬ್ಬರದ ಶತಕದ ನೆರವಿನಿಂದ ಭಾರತ ತಂಡವು ಗುರುವಾರ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡ ವನ್ನು 127 ರನ್ಗಳಿಂದ ಸುಲಭವಾಗಿ ಮಣಿಸಿತು. ಇದರೊಂದಿಗೆ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ಸ್ವೀಪ್ ಮಾಡಿಕೊಂಡಿತು.ಅಮೋಘ ಲಯದಲ್ಲಿರುವ
ಅಭಿಷೇಕ್ (108;34ಎ, 4×9, 6×11) ಅಫ್ಗನ್ ಬೌಲರ್ಗಳ ದಾಳಿಯನ್ನು ಧೂಳೀಪಟ ಮಾಡಿ, ಕೇವಲ 30 ಎಸೆತಗಳಲ್ಲಿ ಶತಕ ದಾಖಲಿಸಿದರು. ಇದರಿಂದ ಭಾರತ 7 ವಿಕೆಟ್ಗಳಿಗೆ 221 ರನ್ ಗಳಿಸಿತು. ಗುರಿಬೆನ್ನಟ್ಟಿದ ಅಫ್ಗನ್ ತಂಡಕ್ಕೆ ಮಧ್ಯಮ ವೇಗಿ ನಿತೀಶ್ ಕುಮಾರ್ ರೆಡ್ಡಿ (25ಕ್ಕೆ 3), ಸ್ಪಿನ್ನರ್ಗಳಾದ ರವಿ ಬಿಷ್ಣೋಯಿ (26ಕ್ಕೆ 3), ಅಕ್ಷರ್ ಪಟೇಲ್ (9ಕ್ಕೆ 2) ಲಗಾಮು ಹಾಕಿದರು. ಹೀಗಾಗಿ, 14.1 ಓವರ್ಗಳಲ್ಲಿ 94 ರನ್ಗಳಿಗೆ ಕುಸಿಯಿತು.ಆರಂಭದಿಂದಲೇ ಎದುರಾಳಿ ಬೌಲರ್ಗಳನ್ನು
ದಂಡಿಸಿದ ಅಭಿಷೇಕ್ ಮತ್ತು ಸಂಜು ಸ್ಯಾಮ್ಸನ್ (50;35ಎ, 4×2, 6×4) ಮೊದಲ ವಿಕೆಟ್ ಜೊತೆಯಾಟದಲ್ಲಿ ಕೇವಲ 59 ಎಸೆತಗಳಲ್ಲಿ 142 ರನ್ ಸೇರಿಸಿದರು. ಅಭಿಷೇಕ್ ಸಿಕ್ಸರ್ಗಳ ಅಬ್ಬರದಿಂದಾಗಿ ಭಾರತ ಪವರ್ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 100 ರನ್ ಕಲೆಹಾಕಿತು. ಅಂತರ ರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 3ನೇ ಶತಕ ದಾಖಲಿಸಿ ಸಂಭ್ರಮಿಸಿದರು.
ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್ಗಳಲ್ಲಿ 7ಕ್ಕೆ221 (ಸಂಜು ಸ್ಯಾಮ್ಸನ್ 50, ಅಭಿಷೇಕ್ ಶರ್ಮಾ 108, ಶ್ರೇಯಸ್ ಅಯ್ಯರ್ 29, ಶಿವಂ ದುಬೆ 14, ಇಶಾನ್ ಕಿಶನ್ 10, ಅಜ್ಮತ್ ಉಲ್ಲಾ ಒಮರ್ಝೈ 27ಕ್ಕೆ2). ಅಫ್ಗಾನಿಸ್ತಾನ: 14.1 ಓವರ್ಗಳಲ್ಲಿ 94 (ಇಬ್ರಾಹಿಂ ಜದ್ರಾನ್ 25;ನಿತೀಶ್ ಕುಮಾರ್ ರೆಡ್ಡಿ 25ಕ್ಕೆ 3, ಅಕ್ಷರ್ ಪಟೇಲ್ 9ಕ್ಕೆ 2, ರವಿ ಬಿಷ್ಣೋಯಿ 26ಕ್ಕೆ 3). ಭಾರತಕ್ಕೆ 127 ರನ್ಗಳ ಜಯ.








