ಸುಳ್ಯ:ರೋಟರಿ ಕ್ಲಬ್ ಸುಳ್ಯ,ರೋಟರಿ ಕ್ಲಬ್ ಸುಳ್ಯ ಸಿಟಿ,ಇಂಟಾರಾಕ್ಟ್ ಕ್ಲಬ್ ರೋಟರಿ ಪ್ರೌಢ ಶಾಲೆ ಮಿತ್ತಡ್ಕ,ರೋಟರಿ ಕ್ಲಬ್ ಬೆಳ್ಳಾರೆ ಅಂತರಾಷ್ಟ್ರೀಯ ಪೋಲಿಯೊ ದಿನದ ಅಂಗವಾಗಿ ಪೋಲಿಯೊ ನಿರ್ಮೂಲನೆಗಾಗಿ ‘ನಮ್ಮ ದೇಶವನ್ನು ಪೋಲಿಯೊ ಮುಕ್ತ ಮಾಡೋಣ ಎಂಬ ಧ್ಯೇಯ ವ್ಯಾಕದೊಂದಿಗೆ ಸುಳ್ಯ ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು. ಜ್ಯೋತಿ ವೃತ್ತದಿಂದ
ಆರಂಭಗೊಂಡ ಜಾಥಾವು ನಗರದಲ್ಲಿ ಸಾಗಿ ರೋಟರಿ ಶಾಲೆಯ ಬಳಿ ಸಮಾಪನಗೊಂಡಿತು. ರೋಟರಿ ಶಾಲಾ ವಿದ್ಯಾರ್ಥಿಗಳು,ರೋಟರಿ ಕ್ಲಬ್ ಪದಾಧಿಕಾರಿಗಳು ಪ್ರಮುಖರು ಉಪಸ್ಥಿತರಿದ್ದರು.ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್, ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ರಾಗೇಶ್ ರಾಘವ್, ಅಸಿಸ್ಟೆಂಟ್ ಗವರ್ನರ್ ಆನಂದ ಖಂಡಿಗ, ಝೋನಲ್ ಲೆಪ್ಟಿನೆಂಟ್, ಗಿರೀಶ್ ನಾರ್ಕೊಡು,ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ಆರಿಫ್ ಬೆಳ್ಳಾರೆ ಪ್ರಮುಖರಾದ
ಡಾ.ಕೇಶವ ಪಿ.ಕೆ, ಪ್ರಭಾಕರನ್ ನಾಯರ್, ಭಾಸ್ಕರನ್ ನಾಯರ್, ಅಬ್ದುಲ್ ಕಲಾಂ, ಸನತ್.ಪಿ.ಆರ್, ಡಾ.ಕೆ.ಜಿ.ಪುರುಷೋತ್ತಮ, ಡಾ.ಶ್ರೀಕೃಷ್ಣ ಭಟ್, ಬಾಪೂ ಸಾಹೇಬ್, ಗಣೇಶ್ ಆಳ್ವ, ಡಾ.ಹರ್ಷಿತಾ ಪುರುಷೋತ್ತಮ,ಬಾಲಕೃಷ್ಣ ಎಸ್ಬಿ ಲ್ಯಾಬ್, ಚಂದ್ರಮತಿ.ಕೆ, ಹರಿರಾಯ ಕಾಮತ್, ಕಸ್ತೂರಿ ಶಂಕರ್, ಗೋಪಿನಾಥ್, ಅಬ್ದುಲ್ ಮಜೀದ್ ಜನತಾ, ಅಬ್ದುಲ್ ಹಮೀದ್ ಜನತಾ, ನಳಿನಿ ಕಿರ್ಲಾಯ, ಶ್ರೀಹರಿ ಪೈಂದೋಡಿ, ಗಿರೀಶ್ ಕುಂಠಿನಿ, ಮಧು ಕಿರಣ್, ವಿನಯಕುಮಾರ್, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್ ಸ್ವಾಗತಿಸಿ, ಡಾ.ಸುಧಾಕರ ಭಟ್ ಪ್ರಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಕಲಾಂ ಕಾರ್ಯಕ್ರಮ ನಿರೂಪಿಸಿದರು.









