ಸುಳ್ಯ:ಕನ್ನಡ ರಾಜ್ಯೋತ್ಸವ ಆಚರಣೆಯ ಧ್ವಜಾರೋಹಣ ಮತ್ತು ಪಥ ಸಂಚಲನ ವಿಳಂಬವಾಗಿ ನಡೆದಿದೆ. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ 9 ಗಂಟೆಗೆ ನಡೆಯುವುದು ಎಂದು

ನಿರ್ಧರಿಸಿ ಆಮಂತ್ರಣ ಪತ್ರಿಕೆ ಮುದ್ರಣವಾಗಿತ್ತು. ಆದರೆ 9.30ಕ್ಕೆ ಧ್ವಜಾರೋಹಣ ನಡೆಯಿತು.ಪ್ರತಿ ವರ್ಷ 9 ಗಂಟೆಗೆ ಧ್ವಜಾರೋಹಣ ಮತ್ತು ಪಥಸಂಚಲನ ನಡೆಯುತ್ತಿತ್ತು. ಈ ಬಾರಿಯೂ 9 ಗಂಟೆಗೆ ಧ್ವಜಾರೋಹಣ ಎಂದು ನಿರ್ಧರಿಸಲಾಗಿತ್ತು. ಆದರೆ ಧ್ವಜಾರೋಹಣ ನಡೆಯುವಾಗ 9.30 ಆಗಿತ್ತು.
ಸಮಾರಂಭದ ಅಧ್ಯಕ್ಷತೆ ವಹಿಸಬೇಕಾದ ಶಾಸಕಿ ಭಾಗೀರಥಿ ಮುರುಳ್ಯ ಸಮಾರಂಭಕ್ಕೆ ಬರುವಾಗ ತಡವಾದ ಕಾರಣ ಕಾರ್ಯಕ್ರಮ ವಿಳಂಬ ಅಯಿತು. ಪಥ ಸಂಚಲನಕ್ಕೆ ವಿದ್ಯಾರ್ಥಿಗಳು ಮತ್ತಿತರ ತಂಡಗಳು 8.45ಕ್ಕೆ ಸಿದ್ಧವಾಗಿ ಮೈದಾನದಲ್ಲಿ ಬಿಸಿಲಲ್ಲಿ ಸುಮಾರು 45 ನಿಮಿಷಗಳ ಕಾಲ ಕಾಯಬೇಕಾಯಿತು. ಅಧಿಕಾರಿಗಳು, ಜನಪ್ರತಿನಿಧಿಗಳು, ಪ್ರಮುಖರು ಕಾರ್ಯಕ್ರಮಕ್ಕೆ ಆಗಮಿಸಿ ಹಲವು ಹೊತ್ತು ಕಾಯಬೇಕಾಯಿತು.
















