ಸುಳ್ಯ:ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ವತಿಯಿಂದ ಕನಕದಾಸರ ಕುರಿತು ಕನಕ ಕಾವ್ಯ ವೈಭವ ಎಂಬ ಸಂಗೀತ- ನೃತ್ಯ ರೂಪಕ, ಕನಕದಾಸರ ಕುರಿತು ಉಪನ್ಯಾಸ, ಗಮಕ ವಾಚನ – ವ್ಯಾಖ್ಯಾನ ಒಳಗೊಂಡಂತೆ ಒಂದು ದಿನದ “ಕನಕ ಉತ್ಸವ” ಕಾರ್ಯಕ್ರಮವು ಗೋವಾದಲ್ಲಿ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಕನಕದಾಸರ ಕುರಿತು ಉಪನ್ಯಾಸ ನೀಡಲು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮವು 24 ಆಗಸ್ಟ್ 2025 ರಂದು ಗೋವಾದಲ್ಲಿ ನಡೆಯಲಿದೆ.















