ಸುಳ್ಯ: ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ. ಆರ್..ಕೆ. ನಾಯರ್ ಅವರ ತಾಯಿ, ಜಾಲ್ಸೂರು ಗ್ರಾಮದ ಎರ್ಮೆಕ್ಕಾರ್ ನಿವಾಸಿ ಕಮಲಾಕ್ಷಿ ಅಮ್ಮ ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳ
ಹಿಂದೆ ಅಸೌಖ್ಯದ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಅವರು ಇಂದು ಬೆಳಿಗ್ಗೆ ನಿಧನರಾದರು.
ಪುತ್ರರಾದ ಬಾಲಚಂದ್ರ ನಾಯರ್, ಡಾ.ಆರ್.ಕೆ. ನಾಯರ್, ಪಿತಾಂಬರನ್ ನಾಯರ್, ಪುತ್ರಿಯರಾದ ಸುಗಂಧಿ, ವಿಜಯಲಕ್ಷ್ಮಿ, ಬಂಧುಮಿತ್ರರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ. ಡಾ. ಆರ್.ಕೆ. ನಾಯರ್ ಅವರು ನಾಗ್ಪುರದಲ್ಲಿದ್ದು, ರಾತ್ರಿ ಅವರು ಬಂದ ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.