ಕಲ್ಲುಗುಂಡಿ:ಕಲ್ಲುಗುಂಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಇದರ ವತಿಯಿಂದ ಸ್ವಲಾತ್ ವಾರ್ಷಿಕ ಹಾಗೂ ಮಜ್ಲಿಸುನ್ನೂರ್ ಕಾರ್ಯಕ್ರಮ ಕಲ್ಲುಗುಂಡಿ ಮಸೀದಿ ವಠಾರದಲ್ಲಿ ನಡೆಯಿತು. ಮಸೀದಿ ಅಧ್ಯಕ್ಷ ಆಲಿ ಹಾಜಿ ಅದ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬರಾದ
ನಾಸಿರ್ ದಾರಿಮಿ ಉದ್ಘಾಟನೆ ನೇರವೇರಿಸಿದರು. ಸ್ವಾಲಾತ್ ವಾರ್ಷಿಕ ಮಜ್ಲಿಸುನ್ನೂರ್ ಕಾರ್ಯಕ್ರಮದ ದುವಾಃ ನೇತೃತ್ವವನ್ನು
ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ವಹಿಸಿದ್ದರು. ಪೇರಡ್ಕ ಜುಮಾ ಮಸೀದಿಯ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್ , ಗೂನಡ್ಕ ಜುಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ. ಕೆ .ಹಮೀದ್ ಗೂನಡ್ಕ ಮಾತನಾಡಿದರು. ಕೊಯನಾಡು ಜುಮಾ ಮಸೀದಿ ಅಧ್ಯಕ್ಷ ಹಾಜಿ ಎಸ್ ಮೊಯ್ದೀನ್, ಖತೀಬ್ ಕೆ. ಯು ಮಹಮ್ಮದ್ ಸಖಾಫಿ ಅಲ್ ಹಿಕಮಿ, ಸಂಪಾಜೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಹಮೀದಿಯ, ಖತೀಬ್ ಉಸ್ತಾದ್ ಲುಕುಮಾನುಲ್ ಹಕೀಂ ಫೈಝಿ, ಫೈಝಲ್ ಝುಹರಿ ಉಸ್ತಾದ್, ಸಂಪಾಜೆ ಸದರ್ ಉಸ್ತಾದ್, ಅಬ್ದುಲ್ ಹಕೀಂ ಜಲಾಲಿ ಸುಳ್ಯ ತಾಲೂಕು ಮದ್ರಸಾ ಮೆನೆಜ್ ಮೆಂಟ್ ಅಧ್ಯಕ್ಷರಾದ ತಾಜ್ ಮಹಮ್ಮದ್ ಸಂಪಾಜೆ, ಸೀರಾಜುಲ್ ಇಸ್ಲಾಂ, ಅಸೋಸಿಯೇಶನ್ ಅಧ್ಯಕ್ಷ ಇಬ್ರಾಹಿಂ ಎ ,ಕೆ. ಅಬೂಬಕ್ಕರ್ ಸೂಪರ್, ಕಲ್ಲುಗುಂಡಿ ಜುಮಾ ಮಸೀದಿಯ ಉಪಾಧ್ಯಕ್ಷ ಅಶ್ರಫ್ ಕೆ.ಎಂ.,ಕಾರ್ಯದರ್ಶಿ ಇರ್ಶಾದ್ ಬದ್ರಿಯಾ, ಸಾದಿಕ್ ,ಸಾಜಿದ್ ಅಜಹರಿ, ಸಾಮಾಜಿಕ, ಧಾರ್ಮಿಕ, ರಾಜಕೀಯ ನೇತಾರರು ಉಪಸ್ತಿತರಿದ್ದರು