ಸುಳ್ಯ:ಸುಳ್ಯದ ಪ್ರತಿಷ್ಠಿತ ಇಲೆಕ್ಟ್ರಾನಿಕ್ಸ್ನಲ್ಲಿ ಮಳಿಗೆ ಜೆ.ಎಸ್.ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ 24ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಅತ್ಯುತ್ತಮ ಗುಣಮಟ್ಟದ ಮತ್ತು ಬ್ರಾಂಡೆಡ್ ಇಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟದ ಮೂಲಕ ಜನಮನ ಗೆದ್ದಿರುವ ಜೆ.ಎಸ್.ಇಲೆಕ್ಟ್ರಾನಿಕ್ಸ್ ಜನರ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಹಾಗೂ ಫರ್ನೀಚರ್ಸ್ ಉಪಕರಣಗಳ ಬೇಡಿಕೆಯನ್ನು
ಯಶಸ್ವಿಯಾಗಿ ಪೂರೈಸಿ ಬೆಳ್ಳಿ ಹಬ್ಬದ ಸಂಭ್ರಮದತ್ತ ಮುನ್ನುಗುತ್ತಿದೆ. ಸುಳ್ಯ ಗಾಂಧಿನಗರದ ಮುಖ್ಯ ರಸ್ತೆಯಲ್ಲಿ ಜನತಾ ಸ್ಟೋರ್ ಮುಂಭಾಗದ ಸಿ.ಎಂ.ಎಸ್ ಬಿಲ್ಡಿಂಗ್ನಲ್ಲಿರುವ ಜೆ.ಎಸ್.ಇಲೆಕ್ಟ್ರಾನಿಕ್ಸ್ ಮತ್ರು ಫರ್ನೀಚರ್ಸ್ ಹಾಗೂ ಶ್ರೀರಾಂಪೇಟೆಯಲ್ಲಿ ಕಾರ್ಯಾಚರಿಸುವ
ಜೆ.ಎಸ್.ಸಿಟಿಇಲೆಕ್ಟ್ರಾನಿಕ್ಸ್ ಹಲವಾರು ವರ್ಷಗಳಿಂದ ಜನರ ವಿಶ್ವಾಸವನ್ನು ಪಡೆದ ಸಂಸ್ಥೆಗಳು. 24ನೇ ವರ್ಷದ ಪಾದಾರ್ಪಣೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಜೆ.ಎಸ್.ಇಲೆಕ್ಟ್ರಾನಿಕ್ಸ್ನಲ್ಲಿ ಅಕರ್ಷಕ ಆಫರ್ಗಳನ್ನು

ಘೋಷಿಸಲಾಗಿದೆ. ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ನಡೆಯುತಿದೆ. ರೂ.3000 ಮೇಲ್ಪಟ್ಟ ಖರೀದಿಗೆ ಉಚಿತ ಅದೃಷ್ಟ ಕೂಪನ್ ನೀಡಲಾಗುತ್ತದೆ. ಬಂಪರ್ ಬಹುಮಾನವಾಗಿ ಬೈಕ್, ದ್ವಿತೀಯ ಬಹುಮಾನ 32 ಎಲ್ಇಡಿ ಟಿವಿ, ತೃತೀಯ ಬಹುಮಾನವಾಗಿ ಮಿಕ್ಸಿ ನೀಡಲಾಗುತ್ತದೆ. ಅಲ್ಲದೆ ಹಲವು ಬಹುಮಾನಗಳನ್ನು ನೀಡಲಾಗುತ್ತದೆ.
24ನೇ ವರ್ಷದ ಪಾದಾರ್ಪಣೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಜೆ.ಎಸ್.ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ನಲ್ಲಿ ಎಲ್ಲಾ ಇಲೆಕ್ಟ್ರಾನಿಕ್ಸ್ ಹಾಗೂ ಫರ್ನೀಚರ್ಸ್ಗಳ ಅತ್ಯಧುನಿಕ ಬ್ರಾಂಡ್ ಮತ್ತು ಆಕರ್ಷಕ ರಿಯಾಯಿತಿ ದರದಲ್ಲಿ ಹಾಗೂ ಉಡುಗೊರೆಯೊಂದಿಗೆ ಲಭ್ಯವಿದೆ.
ಟಿ.ವಿ, ರೆಫ್ರಿಜರೇಟರ್, ಎಸಿ, ಕೂಲರ್, ಮಿಕ್ಸಿ, ಗ್ರೈಂಡರ್, ತವಾ, ಇಸ್ತ್ರಿ ಪೆಟ್ಟಿಗೆ ಸೇರಿ ಎಲ್ಲಾ ಇಲೆಕ್ಟ್ರಾನಿಕ್ಸ್ ಗೃಹೋಪಯೋಗಿ ವಸ್ತುಗಳು, ಅಲ್ಮೆರಾ, ಕಾಟ್ಗಳು, ಡೈನಿಂಗ್ ಟೇಬಲ್, ಉಪಕರಣಗಳು,
ಮನೆಗೆ ಅತೀ ಅಗತ್ಯವಾದ ಇನ್ವರ್ಟರ್ಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮತ್ತೆ ತಡವೇಕೆ ನಿಮ್ಮ ಕನಸಿನ ಹೊಸ ಇಲೆಕ್ಟ್ರಾನಿಕ್ಸ್ ಹಾಗು ಫರ್ನೀಚರ್ಸ್ ಖರೀದಿಗೆ ಜೆ.ಎಸ್.ಇಲೆಕ್ಟ್ರಾನಿಕ್ಸ್ಗೆ ಇಂದೇ ಭೇಟಿ ಕೊಡಿ. ದೀಪಾವಳಿ ಸಂಭ್ರಮವನ್ನು ಇಮ್ಮಡಿಗೊಳಿಸಿ.














