ಸುಳ್ಯ:ಸುಳ್ಯದ ಪ್ರತಿಷ್ಠಿತ ಹಾಗೂ ವಿಶ್ವಾಸಾರ್ಹ ಚಿನ್ನಾಭರಣ ಮಳಿಗೆ
ಸುಳ್ಯದ ಮುಖ್ಯ ರಸ್ತೆ ಕೊಯಿಂಗೋಡಿ ಕಾಂಪ್ಲೆಕ್ಸ್ ನಲ್ಲಿರುವ ಮುಳಿಯ ಕೃಷ್ಣ ಭಟ್ ಸನ್ಸ್ ಜ್ಯುವೆಲ್ಲರ್ಸ್.1991ರಲ್ಲಿ ಆರಂಭಗೊಂಡು ಕಳೆದ ಮೂರೂವರೆ ದಶಕಗಳಿಂದ ಸುಳ್ಯದ ಜನರ ಬೇಡಿಕೆಯ ಚಿನ್ನಾಭರಣಗಳಿಗೆ ಮೂರ್ತರೂಪ ನೀಡಿ, ಜನ ಸಾಮಾನ್ಯರ ಆಭರಣದ ಕನಸನ್ನು ನನಸಾಗಿಸುವ ಮೂಲಕ ಜನ ಮಾನಸದಲ್ಲಿ ನೆಲೆಸಿದ ಸಂಸ್ಥೆ. ಮೂರು ದಶಕಗಳಿಂದ ಸುಳ್ಯದಲ್ಲಿ ಮನೆ ಮಾತಾದ ಚಿನ್ನಾಭರಣಗಳ
ಮಳಿಗೆ. ಇದೀಗ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನಾಭರಣ ಖರೀದಿಗೆ ಭಾರೀ ರಿಯಾಯಿತಿ ನೀಡಿ ಮುಳಿಯ ಜ್ಯುವೆಲ್ಲರ್ಸ್ ಗ್ರಾಹಕರನ್ನು ತನ್ನತ್ತ ಸೆಳೆಯುತಿದೆ.ಚಿನ್ನಾಭರಣಗಳ ಪ್ರತೀ ಪವನಿನ ಮೇಲೆ ರೂ. 1,600 ರಿಯಾಯಿತಿ ಹಾಗೂ ಚಿನ್ನದ ಆಭರಣಗಳ ಮಜೂರಿ ಮೇಲೆ ಶೇ.100 ರಿಯಾಯಿತಿಯ ಭರ್ಜರಿ ಆಫರ್ ನೀಡಲಾಗುತಿದೆ. ಈ ರಿಯಾಯಿತಿ ಸೆ.22 ರಿಂದ ಪ್ರಾರಂಭಗೊಂಡಿದ್ದು ಅ.31 ರವರೆಗೆ ನಡೆಯಲಿದೆ.ಅಲ್ಲದೆ ದೀಪೋತ್ಸವ ಗಿಪ್ಟ್ಬಕೂಪನ್ಗಳನ್ನು ನೀಡಲಾಗುತ್ತಿದ್ದು ಆಕರ್ಷಕ ಬಹುಮಾನ ಗೆಲ್ಲುವ ಅವಕಾಶವೂ ಇದೆ.

ಸುಳ್ಯ ನಗರದ ಹೃದಯಭಾಗದಲ್ಲಿರುವ ಮಳಿಗೆಯಲ್ಲಿ ಪಾರಂಪರಿಕ ಹಾಗೂ ಆಧುನಿಕ ವಿನ್ಯಾಸ ಮತ್ತು ಶೈಲಿಯ ಆಕರ್ಷಕ ಆಭರಣಗಳ ಅಪೂರ್ವ ಸಂಗ್ರಹ ಇದ್ದು ಚಿನ್ನಾಭರಣ ಪ್ರಿಯರಿಗೆ ಮನಸ್ಸಿಗೆ ಒಪ್ಪುವ ಆಭರಣ ಖರೀದಿಗೆ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಆಫರ್ ಮತ್ತು ರಿಯಾಯಿತಿಗಳ ಮೂಲಕ ವೈಶಿಷ್ಟ್ಯಮಯ ಚಿನ್ನಾಭರಣಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು ಸಂಸ್ಥೆಯ ಮಾಲಕರು ಹಾಗೂ ಸಿಬ್ಬಂದಿಗಳು ನಗು ಮೊಗದಿಂದ ಮತ್ತು ಆತ್ಮೀಯವಾಗಿ ಬರ ಮಾಡಿಕೊಂಡು ಉತ್ತಮ ಸೇವೆ ನೀಡುವ ಮೂಲಕ ಅಪಾರ ಸಂಖ್ಯೆಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುತಿದೆ.
ಹಬ್ಬಗಳ ಸಂಭ್ರಮವನ್ನು ಹೆಚ್ಚಿಸಲು ಮತ್ತು ರಿಯಾಯಿತಿ ಮಾರಾಟದ ಲಾಭ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಚಿನ್ನಾಭರಣ ಖರೀದಿಸಲು ಆಗಮಿಸುತ್ತಿದ್ದಾರೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಜ್ರದ ಉಂಗುರ ಮತ್ತು ವಜ್ರದ ಓಲೆಗಳ ವಿಶೇಷ ಸಂಗ್ರಹವಿದೆ.ವಿಶಾಲವಾದ ಮಳಿಗೆಯಲ್ಲಿ ಗ್ರಾಹಕರಿಗೆ ಚಿನ್ನಾಭರಣ ಖರೀದಿಗೆ ವ್ಯವಸ್ಥೆ ಮಾಡಲಾಗಿದೆ.ಗ್ರಾಹಕರಿಗೆ ಮಳಿಗೆಯ ಹಿಂಬದಿಯಲ್ಲಿ ವಾಹನ ಪಾರ್ಕಿಂಗ್ ಗೆ ವ್ಯವಸ್ಥೆ ಕೂಡ ಮಾಡಲಾಗಿದೆ.
ದೀಪಗಳ ಹಬ್ಬ ದೀಪಾವಳಿಯ ಸಂಭ್ರಮವನ್ನು ಹೆಚ್ಚಿಸಲು ಮತ್ತು ಕನಸಿನ ಆಭರಣಗಳನ್ನು ತಮ್ಮದಾಗಿಸಲು ಮುಳಿಯ ಕೃಷ್ಣ ಭಟ್ ಸನ್ಸ್ ಜ್ಯುವೆಲ್ಲರ್ಸ್ಗೆ ಭೇಟಿ ನೀಡಿ.















