ನ್ಯೂಜೆರ್ಸಿ: ಗೋಝ್ಸಾಲೊ ಪ್ಲಾಟಾ ಅವರ ನಿರ್ಣಾಯಕ ಗೋಲಿನ ನೆರವಿನಿಂದ ಬಲಿಷ್ಠ ಜರ್ಮನಿ ತಂಡವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿದ ಈಕ್ವೆಡಾರ್ ತಂಡ ಫಿಫಾ ವಿಶ್ವಕಪ್ನ ನಾಕೌಟ್ ಹಂತ ಪ್ರವೇಶಿಸಿದೆ. ಆರಂಭದಲ್ಲಿ ಲೆರಾಯ್ ಸಾನೆ ಅವರ ಗೋಲಿನಿಂದ ಜರ್ಮನಿ ಮುನ್ನಡೆ ಗಳಿಸಿತು. ಆದರೆ
ನಿಕೋಲಸ್ ಅಂಗ್ಯುಲಾ ಅವರು ಈಕ್ವೆಡಾರ್ ಪರ ಗೋಲು ಬಾರಿಸುವ ಮೂಲಕ ಸಮಬಲ ಸಾಧಿಸಿದರು. ಪಂದ್ಯ ಇನ್ನೇನು ಡ್ರಾನಲ್ಲಿ ಮುಕ್ತಾಯವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾಗ ಕಾರ್ನರ್ನಿಂದ ಪ್ಲಾಟಾ ಹೊಡೆದ ಗೋಲು ಈ ಐತಿಹಾಸಿಕ ವಿಜಯಕ್ಕೆ ಕಾರಣವಾಯಿತು.
ಕ್ಯೂರೋಸಾವೆ ತಂಡವನ್ನು 2-0 ಅಂತರದಲ್ಲಿ ಪರಾಭವಗೊಳಿಸಿದ ಐವರಿ ಕೋಸ್ಟ್ ನಾಕೌಟ್ ಹಂತಕ್ಕೆ ಪ್ರವೇಶಿಸಿದೆ. ನಿಕೋಲಾಸ್ ಪೆಪ್ಪೆ ಅವಳಿ ಗೋಲು ಬಾರಿಸಿ ಜಯದ ರುವಾರಿಯಾದರು.
ಗ್ರೂಪ್ ಎಫ್ ಪಂದ್ಯದಲ್ಲಿ ಟುನೀಷಿಯಾ ತಂಡವನ್ನು 3-1 ಅಂತರದಲ್ಲಿ ಮಣಿಸಿದ ನೆದರ್ಲೆಂಡ್ಸ್ 32 ರ ಹಂತಕ್ಕೆ ಪ್ರವೇಶಿಸಿದೆ.
ಬಲಿಷ್ಠ ಸ್ವೀಡನ್ ತಂಡದ ವಿರುದ್ಧ 1-1 ಅಂತರದ ಡ್ರಾ ಸಾಧಿಸಿದ ಜಪ್ಪಾನ್ ನಾಕೌಟ್ ಪ್ರವೇಶಸಿಸಿತು.ನಾಕೌಟ್ ಪ್ರವೇಶಿಸಿದ ಏಷ್ಯಾದ ಏಕೈಕ ತಂಡ ಜಪಾನ್.ಇದಕ್ಕೂ ಮುನ್ನ ದಕ್ಷಿಣ ಕೊರಿಯಾ ತಂಡವನ್ನು 1-0 ಗೋಲಿನಿಂದ ಸೋಲಿಸಿದ ದಕ್ಷಿಣ ಆಫ್ರಿಕಾ ನಾಕೌಟ್ ಪ್ರವೇಶಿಸಿತು.






