ಬೆಳ್ಳಾರೆ: ಬೆಳ್ಳಾರೆ ಝಕರಿಯಾ ಜುಮ್ಮಾ ಮಸೀದಿ ಆಡಳಿತ ಮಂಡಳಿ ನಿರ್ದೇಶಕರಾಗಿ 11 ಮಂದಿ ಆಯ್ಕೆಯಾಗಿದ್ದಾರೆ. ಇಂದು ಚುನಾವಣೆ ನಡೆದು ನಿರ್ದೇಶಕರ ಆಯ್ಕೆ ನಡೆಯಿತು. ನೂತನ ಆಡಳಿತ ಮಂಡಳಿಯ
ನಿರ್ದೇಶಕರಾಗಿ ಅಬೂಬಕ್ಕರ್ ಯು. ಹೆಚ್, ಅಬ್ದುಲ್ ಖಾದರ್ ಬಾಯಂಬಾಡಿ, ಅಬ್ದುಲ್ ನಾಸೀರ್ ಯು ಎ, ಅಬ್ದುಲ್ ರಹಿಮಾನ್ ಕೆ , ಹಮೀದ್ ಹೆಚ್, ಎಂ, ಅಜರುದ್ದೀನ್, ಹನೀಪ್ ಎನ್, ಇಸ್ಮಾಯಿಲ್ ಬಿ, ಅಬ್ದುಲ್ ಬಶೀರ್, ಹಸೈನಾರ್ ಬಿ, ಹಮೀದ್ ಕೆ ಎಂ ಆಯ್ಮೆಯಾದರು.
11 ಸ್ಥಾನಗಳಿಗಾಗಿ 22 ಮಂದಿ ಕಣದಲ್ಲಿದ್ದರು. ಇಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಜಮಾಅತಿನ 460 ಸದಸ್ಯರಲ್ಲಿ 411 ಮಂದಿ ಮತ ಚಲಾಯಿಸಿದ್ದರು. ಬಳಿಕ ಪೊಲೀಸ್ ಬಂದೋಬಸ್ತಿನಲ್ಲಿ ವಕ್ಪ್ ಅಧಿಕಾರಿಗಳು ಮತ ಎಣಿಕೆ ಪ್ರಕ್ರಿಯೆ ನಡೆಸಿ ಫಲಿತಾಂಶ ಪ್ರಕಟಿಸಿದರು. ಜಿದ್ದಾ ಜಿದ್ದಿನ ಚುನಾವಣಾ ಫಲಿತಾಂಶಕ್ಕಾಗಿ ಹಲವಾರು ಮಂದಿ ಕುತೂಹಲದಿಂದ ಕಾದಿದ್ದರು.