ಗುಲ್ಬರ್ಗ: ರಾಜ್ಯದಾದ್ಯಂತ ಕವಿಗೋಷ್ಠಿ, ಉಚಿತ ತರಬೇತಿ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಬದ್ಧತೆಯನ್ನು ಮೆರೆಯುತ್ತಿರುವ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ತಂಡದ ಸದಸ್ಯರನ್ನು ಗುಲ್ಬರ್ಗದ ಸೇಡಂನ ಕರ್ನಾಟಕ ಭವನದಲ್ಲಿ ಸನ್ಮಾನಿಸಲಾಯಿತು. ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ
ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ, ತಂಡದ ಸದಸ್ಯರಾದ ಅಯ್ಯುಬ್ ಗೂನಡ್ಕ ಮತ್ತು ಮಂಜುನಾಥ ಹಿರಿಯೂರವರನ್ನು ಗುಲ್ಬರ್ಗ ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಅಧ್ಯಯನ ವಿಭಾಗದ ಉಪನ್ಯಾಸಕರಾದ ಡಾ. ರಾಜಶೇಖರ ಎಲ್. ಕಟ್ಟಿಮನಿ, ಓಂಪ್ರಕಾಶ ಪಾಟೀಲ ತರನಹಳ್ಳಿ, ಶಶಿಕಾಂತ ಬೇಡಸೂರ, ಲಕ್ಷ್ಮೀನಾರಾಯಣ ಚಿಮಚೋಡ್ಕರ, ಸಂದೀಪ ಪ್ಯಾಟಿ, ಗಣೇಶ್ ರವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸುಮಾರು 300 ಕ್ಕೂ ಅಧಿಕ ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.