ಸುಳ್ಯ:ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್ ಹಿರಿಯ ಮುಖಂಡರಾದ ಐವನ್ ಡಿಸೋಜ ರವರು ಸೆ.16 ರಂದು ಸುಳ್ಯಕ್ಕೆ ಭೇಟಿ ನೀಡಿದರು.
ಈ ಸಂಧರ್ಭದಲ್ಲಿ ಸುಳ್ಯ ಅನ್ಸಾರಿಯಾ ಎಜುಕೇಶನ್ ಸೆಂಟರಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳ ಜೊತೆ ಈದ್ ಮಿಲಾದ್ ಆಚರಿಸಿದರು
ಇದೇ ಸಂದರ್ಭದಲ್ಲಿ ಅನ್ಸಾರಿಯಾ ಆಡಳಿತ ಸಮಿತಿ ವತಿಯಿಂದ
ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ರಾಜ್ಯ ಕಾರ್ಯದರ್ಶಿ ಕೆ.ಎಂ ಮುಸ್ತಫಾ ಸ್ವಾಗತಿಸಿ ಸರಕಾರದ ಅನುದಾನದಿಂದ ಅನ್ಸಾರಿಯಾ ಬಳಿ ಇತ್ತೀಚಿಗೆ ಸುರಿದ ಮಳೆಗೆ ಕುಸಿದ ತಡೆಗೊಡೆಗೆ ಅನುದಾನ ಒದಗಿಸಿ ಕೊಡಲು ಮನವಿ ನೀಡಿದರು. ಈ ಸಂದರ್ಭದಲ್ಲಿ ಅನ್ಸಾರಿಯಾ ಅಧ್ಯಕ್ಷ ಹಾಜಿ ಅಬ್ದುಲ್ ಮಜಿದ್ ಜನತಾ,ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಹೀದ್ ತೆಕ್ಕಿಲ್, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ,ಕೆ ಪಿ ಸಿ ಸಿ ಸದಸ್ಯ ಡಾ.ರಘು,ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ,ಸಿದ್ದೀಕ್ ಕೊಕ್ಕೊ,ರಿಯಾಜ್ ಕಟ್ಟೆಕ್ಕಾರ್, ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್,ಅಲ್ಪಸಂಖ್ಯಾತ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ,ಅನ್ಸಾರಿಯಾ ಉಪಾಧ್ಯಕ್ಷ ಎಸ್ ಪಿ ಅಬೂಭಕ್ಕರ್ ನಿರ್ದೇಶಕರಾದ ಶಾಫಿ ಕುತ್ತಮೊಟ್ಟೆ,ಕೆಬಿ ಇಬ್ರಾಹಿಂ,ಶರಿಫ್ ಜಟ್ಟಿಪಳ್ಳ, ಅನ್ಸಾರಿಯಾ ವ್ಯವಸ್ಥಾಪಕ ಉವೈಸ್ ಬಿಟಿಗೆ, ಮೊದಲಾದವರು ಉಪಸ್ಥಿತರಿದ್ದರು.
ಅನ್ಸಾರಿಯಾ ಖತೀಬರಾದ ಹಾಮಿದ್ ಸಖಾಫಿ ದುವಾಶಿರ್ವಚನ ಮಾಡಿ ಶುಭ ಹಾರೈಸಿದರು