ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಜನವರಿ 29 ರಂದು ಬೆಳಿಗ್ಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ತನ್ನ ಐತಿಹಾಸಿಕ 100 ನೇ ಉಡಾವಣೆಯನ್ನು ನಡೆಸಿತು. ಎನ್ವಿಎಸ್-02 ಉಪಗ್ರಹದೊಂದಿಗೆ ಜಿಎಸ್ಎಲ್ವಿ-ಎಫ್15 ರಾಕೆಟ್ ಬಾಹ್ಯಾಕಾಶ ನಿಲ್ದಾಣದ
ಎರಡನೇ ಉಡಾವಣಾ ಪ್ಯಾಡ್ನಿಂದ ಬೆಳಿಗ್ಗೆ 6.23 ಕ್ಕೆ ಉಡಾವಣೆಯಾಯಿತು. ಎನ್ವಿಎಸ್-02 ಉಪಗ್ರಹವನ್ನು ಇತರ ಉಪಗ್ರಹ ಆಧಾರಿತ ಕಾರ್ಯ ಕೇಂದ್ರಗಳ ಬೆಂಬಲದೊಂದಿಗೆ ಯು.ಆರ್.ಸ್ಯಾಟಲೈಟ್ ಸೆಂಟರ್ ನಲ್ಲಿ ವಿನ್ಯಾಸಗೊಳಿಸಿ ಸಂಯೋಜಿಸಲಾಗಿದೆ.“2025 ರ ಮೊದಲ ಉಡಾವಣೆಯನ್ನು ಯಶಸ್ವಿಯಾಗಿ ಸಾಧಿಸಲಾಗಿದೆ. ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಇರಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಹೇಳಿದ್ದಾರೆ.