ಅಯ್ಯನಕಟ್ಟೆ: ಮಾಜಿ ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬುಧವಾರ ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಜಾತ್ರೋತ್ಸವಕ್ಕೆ ಆಗಮಿಸಿ ದೈವಗಳ ಅಶೀರ್ವಾದ ಪಡೆದರು. ದೈವಗಳು ಅಭಯ ಹಸ್ತ ನೀಡಿ ಕಟೀಲ್ ಅವರನ್ನು ಹರಸಿದವು. ಅಯ್ಯನಕಟ್ಟೆ ಜಾತ್ರೋತ್ಸವದ ಕೊನೆಯ ದಿನವಾದ
ಬುಧವಾರ ಹಗಲು ನಡೆದ ಕೊಡಮಣಿತ್ತಾಯ, ಧೂಮಾವತಿ, ಶಿರಾಡಿ ದೈವಗಳ ನೇಮೋತ್ಸವ ಸಂದರ್ಭ ಆಗಮಿಸಿದ ಅವರು ನೇಮೋತ್ಸವ ವೀಕ್ಷಿಸಿ ಕೊಡಮಣಿತ್ತಾಯ, ಧೂಮಾವತಿ, ಶಿರಾಡಿ ದೈವಗಳ ಆಶೀರ್ವಾದ ಪಡೆದರು. ರಾಜಮುದ್ರೆಯ ಉನ್ನತ ಸ್ಥಾನಮಾನಗಳು ಮುಂದೆಯೂ ದೊರೆಯುವಂತಾಗಲಿ ಎಂದು ದೈವಗಳು ಕಟೀಲ್ ಅವರನ್ನು ಹರಸಿದರು.