ಸುಳ್ಯ: ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸೆ. 14 ರಂದು ಈದ್ ಮಿಲಾದ್ ಮತ್ತು ಓಣಂ ಹಬ್ಬವನ್ನು ಆಚರಿಸಲಾಯಿತು ಕಾರ್ಯಕ್ರಮವನ್ನು ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಈದ್ ಮಿಲಾದ್ ಆಚರಣೆಯ ಮಹತ್ವದ ಬಗ್ಗೆ
9ನೇ ತರಗತಿಯ ದೃತಿ. ಎಸ್ ತಿಳಿಸಿದರೆ, ಓಣಂ ಆಚರಣೆಯ ಮಹತ್ವವನ್ನು ತೃಪ್ತಿ ತಿಳಿಸಿದಳು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು, ವಿವಿಧ ನೃತ್ಯಗಳನ್ನು ಮಾಡಿ, ಪೂಕಳಂ ಹಾಕಿ ಮನರಂಜಿಸಿದರು.
ಈ ಕಾರ್ಯಕ್ರಮವನ್ನು ಶ್ರದ್ಧ ಪೈ ಮತ್ತು ಬಿ. ಎ ಫಾತಿಮತ್ ತನ್ಸಿಫ ನಿರೂಪಿಸಿದರೆ, ಆಯಿಷತ್ ಉಮ್ಮಲ್ ಫಿದಾ ಸ್ವಾಗತಿಸಿದಳು. ಶಾಲಾ ಸಾಂಸ್ಕೃತಿಕ ಸಂಯೋಜನಾಧಿಕಾರಿ ಪ್ರಜ್ಞಾ ಡಿ ಆರ್ ಸಹಕರಿಸಿದರು ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.