ಸುಳ್ಯ:ಟೀಮ್ ಅಡ್ಮಿನ್ ಐಪಿಎಲ್ ಪ್ರೆಡಿಕ್ಷನ್ 2025 ಫಲಿತಾಂಶ ಪ್ರಕಟಿಸಲಾಗಿದೆ. 10 ತಂಡಗಳ 80 ಆಟಗಾರರ ಮದ್ಯೆ ನಡೆದ
ಪ್ರೆಡಿಕ್ಷನ್ ವಿನೂತನವಾಗಿ ಪರಿಚಯಿಸಿದ ತಂಡಗಳ ಸ್ಪರ್ಧೆಯಾಗಿತ್ತು
ತಂಡದ ವಿಭಾಗದಲ್ಲಿ ಮುಸ್ತಫಾ ಪಾಂಡಿ ಮಾಲಕತ್ವದ ರಶೀದ್ ದೊಡ್ಡಡ್ಕ ನಾಯಕತ್ವದ ಸೌದಿ ಲೆಜೆಂಡ್ಸ್ ಪ್ರಥಮ, ಫೈಝಲ್ ಕಟ್ಟೆಕಾರ್ಸ್ ಮಾಲಕತ್ವದ ಉಬೈ ಬೇಬಿಝೋನ್ ನಾಯಕತ್ವದ
ಕಿಂಗ್ಸ್ ಕಟ್ಟಕಾರ್ಸ್ ದ್ವಿತೀಯ,ಸಿರಾಜ್ ಗೂನಡ್ಕ ಮಾಲಕತ್ವದ ಅಜ್ಮಲ್ ಗೂನಡ್ಕ ನಾಯಕತ್ವದ ರೋಯಲ್ ಚಾಲೆಂಜರ್ಸ್ ತೃತೀಯ, ಸಿನಾನ್ ಮಾಲಕತ್ವದ ರಶೀದ್ ಅಡಿಮಾರಡ್ಕ ನಾಯಕತ್ವದ ಡೇರ್ ಡೆವಿಲ್ಸ್ ಅಬೂದಾಬಿ ಚತುರ್ಥ ಸ್ಥಾನ ಪಡೆಯಿತು.ವ್ಯಯುಕ್ತಿಕ ವಿಭಾಗದಲ್ಲಿ ರೊಯಲ್ ಚಾಲೆಂಜರ್ಸ್ ತಂಡದ ಮಿಕ್ದಾದ್ ಒಮಾನ್ ಪ್ರಥಮ ಬಹುಮಾನ ರೂ 5000 ಮತ್ತು ಟ್ರೋಫಿ, ಸೌದಿ ಲೆಜಂಡ್ ತಂಡದ ಝಹೀರ್ ಪೆರಾಜೆ ದ್ವಿತೀಯ ಬಹುಮಾನ ರೂ 3000 ಮತ್ತು ಟ್ರೋಫಿ, ಶಫೀಕ್ ಕುಂಬಕ್ಕೊಡ್ ತೃತೀಯ ರೂ 2000 ಮತ್ತು ಟ್ರೋಫಿ,ಬಾತಿಷಾ ಬಿಳಿಯಾರು ಚತುರ್ಥ ಬಹುಮಾನ ರೂ 1000 ಮತ್ತು ಟ್ರೋಪಿ ಪಡೆದುಕೊಂಡರು.
ಫೇರ್ ಪ್ಲೇ ಅವಾರ್ಡ್ ಪ್ರಶಸ್ತಿಯನ್ನು ಕಿಂಗ್ಸ್ ಕಟ್ಟೆಕ್ಕಾರ್ ಪಡೆದುಕೊಂಡರೆ, ಎಮರ್ಜಿಂಗ್ ಪ್ಲೆಯರ್ ಪ್ರಶಸ್ತಿಯನ್ನು ರೋಯಲ್ ಚಾಲೆಂಜರ್ಸ್ ಆಟಗಾರ ಅಜ್ಮಲ್ ಸಿನಾನ್ ಪಡೆದುಕೊಂಡರು
ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಜಿ.ಕೆ.ಹಮೀದ್, ಮತ್ತು ಪಿಕೆ. ಅಬೂಸಾಲಿ, ಎನ್ಎಸ್ಯುಐ ಕಾರ್ಯದರ್ಶಿ ಉಬೈಸ್ ಗೂನಡ್ಕ,ಸಾಮಾಜಿಕ ಕಾರ್ಯಕರ್ತರಾದ ರಹೀಂ ಬೀಜದಕಟ್ಟೆ, ಮತ್ತು ಫಾರೂಖ್ ಕಾನಕ್ಕೋಡ್, ಉದ್ಯಮಿ ಪೈಝಲ್ ಕಟ್ಟೆಕ್ಕಾರ್, ಅತಾವುಲ್ಲಾ ಕೆ.ಎಂ. ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರುಅಡ್ಮಿನ್ ಐಪಿಎಲ್ ಪ್ರೆಡಿಕ್ಷನ್ 2025 ರ ವ್ಯವಸ್ಥಾಪಕರಾಗಿ ಬದ್ರುದ್ದಿನ್ ಗೂನಡ್ಕ,ಮುಸ್ತಫಾ ಪಾಂಡಿ
ಸಿರಾಜುದ್ದಿನ್, ಅಝರ್ ಚೇರೂರ್ ಹಾಗೂ ಅಯ್ಯುಬ್ ಚೆರೂರ್ ಕಾರ್ಯ ನಿರ್ವಹಿಸಿದರು.