ಸುಳ್ಯ:ದ.ಕ ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ದರ್ಶನ್ ಹೆಚ್.ವಿ. ಅವರನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಮುಖಂಡರು ಜಿಲ್ಲಾಧಿಕಾರಿ ಕಛೇರಿಯಲ್ಲಿ ಭೇಟಿಯಾಗಿ ಆಭಿನಂದಿಸಿದರು. ಈ ಸಂದರ್ಭದಲ್ಲಿ
ಸುಳ್ಯ ವಿಧಾನಸಭಾಕ್ಷೇತ್ರದ ಕಂದಾಯ ಇಲಾಖೆಯ ಸಮಸ್ಯೆಗಳ ಬಗ್ಗೆ ಮತ್ತು 94c, ಪ್ಲಾಟಿಂಗ್, ಭಾಗಷಃ ಅರಣ್ಯ, ಬಡವರಿಗೆ ಮನೆ ಕಟ್ಟಲು ತೊಂದರೆಯಾಗುತ್ತಿರುವ ಕೆಂಪುಕಲ್ಲು,ಮರಳು ವಿಚಾರಗಳನ್ನು ಡಿ.ಸಿ.ಯವರ ಗಮನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಪಂಚಾಯತ್ ಸದಸ್ಯ ಹರೀಶ ಕಂಜಿಪಿಲಿ,ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಮುಳಿಯ ಕೇಶವ ಭಟ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ,ಕಾಣಿಯೂರು ಸೊಸೈಟಿ ಅಧ್ಯಕ್ಷ ಗಣೇಶ ಉದನಡ್ಕ,ಮಾಜಿ ಗ್ರಾಮಪಂಚಾಯತ್ ಸದಸ್ಯ ರಾಕೇಶ ಮೆಟ್ಟಿನಡ್ಕ, ರಾಮಚಂದ್ರ ಎಣಿತಡ್ಕ, ಉಪಸ್ಥಿತರಿದ್ದರು.