ಸುಳ್ಯ: ಸುಳ್ಯ- ಬಂದಡ್ಕ ಅಂತಾರಾಜ್ಯ ರಸ್ತೆಯಲ್ಲಿ ಕನ್ನಡಿತೋಡು ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಬಿದ್ದು ರಸ್ತೆ ಬಂದ್ ಆಗಿದೆ. ಸುಮಾರು 1.30ರ ವೇಳೆಗೆ ಮರ ಬಿದ್ದು ಬ್ಲಾಕ್ ಆಗಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯದಿಂದ

ರಸ್ತೆ ತಡೆ ಉಂಟಾಗಿದೆ ಎಂದು ರಸ್ತೆಯ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.ಅಂತಾರಾಜ್ಯ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಡೆ ಉಂಟಾಗಿದ್ದು ಎರಡೂ ಭಾಗದಲ್ಲಿ ವಾಹನಗಳ ಸರತಿ ಸಾಲು ಉಂಟಾಗಿದೆ. ಮರದ ತೆರವು ಕಾರ್ಯಚಾರಣೆ ನಡೆಸಲಾಗುತ್ತಿದೆ. ಸುಳ್ಯ ತಾಲೂಕು ಹಾಗೂ ಕಾಸರಗೋಡಿನ ಗಡಿ ಗ್ರಾಮಗಳಲ್ಲಿ ಬೆಳಗ್ಗಿನಿಂದ ಭಾರೀ ಮಳೆಯಾಗುತಿದೆ.
