ನ್ಯೂಯಾರ್ಕ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಅಲ್ಪ ಮೊತ್ತಕ್ಕೆ ಕುಸಿದಿದೆ. ಮೊದಲು ಬ್ಯಾಟ್ ಮಾಡಿದ ಭಾರತ ತಂಡ 19 ಓವರ್ಗಳಿಗೆ ಕೇವಲ 119 ರನ್ಗಳನ್ನು ಗಳಿಸಿ ಆಲ್ಔಟ್ ಆಯಿತು. ಆ ಮೂಲಕ
ಪಾಕಿಸ್ತಾನ ತಂಡಕ್ಕೆ 120 ರನ್ ಸಾಧಾರಣ ಗುರಿಯನ್ನು ನೀಡಿದೆ. ಭಾರತದ ರಿಷಭ್ ಪಂತ್ 42 ರನ್ ಹಾಗೂ ಅಕ್ಷರ್ ಪಟೇಲ್ 20 ರನ್ ಹಾಗೂ ರೋಹಿತ್ ಶರ್ಮಾ 13 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದವರು ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ಪಾಕಿಸ್ತಾನದ ಬಿಗು ಬೌಲಿಂಗ್ ದಾಳಿಯ ಮುಂದೆ ಭಾರತದ ಬ್ಯಾಟರ್ಗಳು ಪೆವಿಲಿಯನ್ಗೆ ಪೆರೇಡ್ ನಡೆಸಿದರು. ನಸೀಮ್ ಶಾ ಹಾಗೂ ಹ್ಯಾರಿಸ್ ರೌಫ್ ತಲಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಆಮಿರ್ ಎರಡು ವಿಕೆಟ್ ಕಿತ್ತರು.