ಗಾಲ್:ಯುವ ಸ್ಪಿನ್ನರ್ ಮಾನವ್ ಸುತಾರ್ ಭರ್ಜರಿ ಬೌಲಿಂಗ್ ದಾಳಿಯ ನೆರವಿನಿಂದ ಇಲ್ಲಿ ನಡೆದ ಆತಿಥೇಯ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 165 ರನ್ಗಳ ಗೆಲುವು ದಾಖಲಿಸಿದೆ.372 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು 77.4 ಓವರ್ಗಳಲ್ಲಿ
206 ರನ್ಗಳಿಗೆ ಆಲೌಟ್ ಆಗುವ ಸೋಲನುಭವಿಸಿತು. ನಾಲ್ಕನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 84 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಐದನೆ ದಿನದಾಟ ಆರಂಭಿಸಿದ ಶ್ರೀಲಂಕಾ ಪರ ನಾಯಕ ದನಂಜಯ್ ಡಿ ಸಿಲ್ವಾ (59) ಹಾಗೂ ಸೋನಲ್ ದಿನುಶಾ (84) ಉತ್ತಮ ಆಟ ಆಡುವ ಮೂಲಕ ತಂಡವನ್ನು ತೀವ್ರ ಕುಸಿತದಿಂದ ಪಾರು ಮಾಡಿದರು. ಈ ಜೋಡಿ 5ನೇ ವಿಕೆಟ್ಗೆ 95 ರನ್ಗಳ ಜೊತೆಯಾಟ ಆಡಿದರು.
ಆದರೆ ಬಳಿಕ ಶ್ರೀಲಂಕಾ ಧಿಡೀರ್ ಕುಸಿತ ಅನುಭವಿಸಿತು.
ಭಾರತದ ಪರ ಮಾನವ್ ಸುತಾರ್ 6 ವಿಕೆಟ್, ಪ್ರಸಿದ್ಧ ಕೃಷ್ಣ 2, ರವೀಂದ್ರ ಜಡೇಜ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ತನ್ನ ಮೊದಲ ಇನಿಂಗ್ಸ್ನಲ್ಲಿ ಕನ್ನಡಿಗ ದೇವದತ್ತ ಪಡಿಕ್ಕಲ್ ಶತಕ (167), ಕೆ.ಎಲ್. ರಾಹುಲ್ (82) ಹಾಗೂ ಧ್ರವ್ ಜುರೆಲ್ (51) ರನ್ ಕಲೆಹಾಕುವ ಮೂಲಕ 462 ರನ್ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡ 284 ರನ್ಗಳಿಗೆ ಆಲೌಟ್ ಆಗುವ ಮೂಲಕ 178 ರನ್ಗಳ ಬೃಹತ್ ಹಿನ್ನಡೆ ಅನುಭವಿಸಿತು.
ಮೊದಲ ಇನಿಂಗ್ಸ್ನ ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ರಿಷಬ್ ಪಂತ್ ಅವರ ಚುರಿಕಿನ (66) ರನ್ಗಳ ನೆರವಿನಿಂದ 193 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಭಾರತ ತಂಡವು ಮೊದಲ ಇನಿಂಗ್ಸ್ ಮುನ್ನಡೆ ಸಹಿತ ಶ್ರೀಲಂಕಾ ಗೆಲುವಿಗೆ 372 ರನ್ಗಲ ಗುರಿ ನೀಡಿತ್ತು.








































