ಮಂಗಳೂರು: ಸಂಗೀತದ ಮೂಲಕ ದೈವಿಕ ಆನಂದ ಹೊಂದಲು ಸಾಧ್ಯ,ಸ್ವಾಮಿ ವಿವೇಕಾನಂದರು ಸಂಗೀತದ ಬಗ್ಗೆ ಆಭ್ಯಾಸ ಮಾಡಿದ್ದರು ಮತ್ತು ಪ್ರೇಮಿಯಾಗಿದ್ದರು ಎಂದು ಮಂಗಳೂರಿನ ರಾಮ ಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮನಂದ ಜಿ ತಿಳಿಸಿದ್ದಾರೆ.
ಅವರು ಕಲಾಸಾಧನ ಸಂಸ್ಥೆ ಇದರ ಆಶ್ರಯದಲ್ಲಿ ರಾಮಕೃಷ್ಣ ಮಿಷನ್ ಸಹಯೋಗದಲ್ಲಿ ನಗರದ ರಾಮ ಕೃಷ್ಣ ಮಠದಲ್ಲಿ
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸಂಭ್ರಮ ‘ ರಾಗ ಸುಧಾ’ ಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್,ಅದಾನಿ ಸಮೂಹ ಸಂಸ್ಥೆ ಗಳ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ,ದ.ಕ ಜಿಲ್ಲಾ ಉಪ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮ ರಡ್ಡಿ, ಖ್ಯಾತ ಹೃದ್ರೋಗ ತಜ್ಞ ಡಾ. ಮೋಹನ್ ಪೈ,,ಎಂ ಆರ್ ಪಿ ಎಲ್ ನಿವೃತ್ತ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ,ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಪ್ರಶಾಂತ್ ಪೈ,ಶಕ್ತಿನಗರದ ಶಕ್ತಿ ಕಾಲೇಜು ಆಡಳಿತಾಧಿಕಾರಿ ರಮೇಶ್,ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್,ಮಂಗಳೂರು ರೋಟರಿ ಸೆಂಟ್ರಲ್ ನ ನಿಕಟ ಪೂರ್ವ ಅಧ್ಯಕ್ಷ ಭಾಸ್ಕರ ರೈ ಕಟ್ಟ, ಉಪಸ್ಥಿತರಿದ್ದರು.ಕಲಾ ಸಾಧನ ಸಂಸ್ಥೆ ನಿರ್ದೇಶಕಿ ವಿಭಾ ಶ್ರೀನಿವಾಸ್ ನಾಯಕ್ ಸ್ವಾಗತಿಸಿದರು. ಪಾಂಡುರಂಗ ಆಚಾರ್ಯ ವಂದಿಸಿದರು. ಶ್ರೀನಿವಾಸ್ ನಾಯಕ್ ಇಂದಾಜೆ ಕಾರ್ಯಕ್ರಮ ನಿರೂಪಿಸಿದರು.
ಸ್ಮಿತಾ ಅವರು ಕಲಾವಿದರ ಪರಿಚಯ ಮಾಡಿಕೊಟ್ಟರು. ಇದೇ ವೇಳೆ ಕಲಾವಿದರನ್ನು ಸನ್ಮಾನಿಸಲಾಯಿತು.
ಖ್ಯಾತ ಹಿಂದೂಸ್ತಾನಿ ಗಾಯಕರಾದ ಪುಣೆಯ ಆದಿತ್ಯ ಮೋದಕ್ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು ತಬಲಾದಲ್ಲಿ ಬೆಂಗಳೂರಿನ ಅಕ್ಷಯ್ ಜೋಷಿ, ಹಾರ್ಮೋನಿಯಂ ಯಲ್ಲಿ ಯಲ್ಲಾಪುರದ ಸತೀಶ್ ಭಟ್ ಹೆಗ್ಗಾರ್, ತಾನ್ಪುರದಲ್ಲಿ ಮಂಗಳೂರಿನ ಕಾರ್ತಿಕ್ ಹಾಗೂ ಪ್ರದಯ್ ಸಾಥ್ ನೀಡಿದರು.










