ಸುಳ್ಯ:ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಸುಳ್ಯ ಕರಯೋಗಂ ವತಿಯಿಂದ ಕುಟುಂಬ ಸಮ್ಮಿಲನ ಮತ್ತು ಓಣಂ ಆಚರಣೆಯು ಸೆ. 6 ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.ಸುಳ್ಯಂ ಕರಯೋಗಂ ಅಧ್ಯಕ್ಷ ಕೃಷ್ಣನ್ ನಾಯರ್ ಕನಕರಂಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು
ಎನ್.ಎಸ್. ಎಸ್. ಹೊಸದುರ್ಗ ಕರಯೋಗಂ ಉಪಾಧ್ಯಕ್ಷ ಶ್ರೀಕುಮಾರ್ ನಾಯರ್ ಕೋಡೋತ್ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಕೆ.ಎನ್.ಎಸ್.ಎಸ್. ಮಂಗಳೂರು ಕರಯೋಗಂ ಅಧ್ಯಕ್ಷ ಮುರಳಿ ಹೊಸಮಜಲು, ಸುಳ್ಯ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ.ರಾಮ್ ಮೋಹನ್ ಭಾಗವಹಿಸಿದ್ದರು.ಕೆ.ಎನ್.ಎಸ್.ಎಸ್. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ವಿ.ನಾರಾಯಣನ್ ಮತ್ತು ಉಪಾಧ್ಯಕ್ಷ ಮೋಹನ್ಕುಮಾರ್ ಆಗಮಿಸಿ ಶುಭ ಹಾರೈಸಿದರು.
ಕರಯೋಗಂ ಸದಸ್ಯರಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿರುವ ಭಾಸ್ಕರನ್ ನಾಯರ್ ಮಧುವನ ( ಕೃಷಿ ), ಜನಾರ್ಧನನ್ ನಾಯರ್ ಅರಂತೋಡು ( ಸೈನಿಕ ಸೇವೆ ), ಬಾಲಕೃಷ್ಣನ್ ನಾಯರ್ ಎಸ್.ಬಿ.ಲ್ಯಾಬ್ ( ವಾಣಿಜ್ಯೋದ್ಯಮ ), ಶಕುಂತಲಾ ಕೃಷ್ಣನ್ ಕುತ್ತಮೊಟ್ಟೆ ( ವೃತ್ತಿ ಸೇವೆ ), ರಮೇಶ್ ನಂಬಿಯಾರ್ ಚೆಂಬು ( ಸಮಾಜ ಸೇವೆ ) ಅವರನ್ನು

ಸನ್ಮಾನಿಸಲಾಯಿತು. . ಕೆ.ಎನ್.ಎಸ್.ಎಸ್. ಸುಳ್ಯ ಕರಯೋಗಂ ಉಪಾಧ್ಯಕ್ಷ ದುರ್ಗಾಕುಮಾರ್ ನಾಯರ್ಕೆರೆ ಅಭಿನಂದನಾ ಭಾಷಣ ಮಾಡಿದರು.ಸಿಂಧೂರಂ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಡಿ. ಪ್ರಸಾದ್ ಕಾರ್ಯದರ್ಶಿ ಪ್ರತಿಭಾ ದುರ್ಗಾಕುಮಾರ್ ಉಪಸ್ಥಿತರಿದ್ದರು.
ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಪ್ರತಿಭಾವಂತ ಮಕ್ಕಳಿಗೆ ದತ್ತಿ ನಿಧಿ ವಿದ್ಯಾರ್ಥಿ ವೇತನ ವಿತರಣೆ ನಡೆಯಿತು. ಶ್ರೀಕಲಾ ಬಾಲಕೃಷ್ಣನ್ ಬಹುಮಾನಿತರ ಪಟ್ಟಿ ವಾಚಿಸಿದರು.ಶ್ರೀಲಯ ಮಧುವನ ಪ್ರಾರ್ಥಿಸಿದರು. ಕರಯೋಗಂ ಕೋಶಾಧಿಕಾರಿ ಪ್ರಭಾಕರನ್ ನಾಯರ್ ಸ್ವಾಗತ್ ಸ್ವಾಗತಿಸಿದರು. ಕಾರ್ಯದರ್ಶಿ ಶಶಿಧರನ್ ನಾಯರ್ ವರದಿ ವಾಚಿಸಿದರು. ವಿಶ್ವನಾಥನ್ ನಾಯರ್ ಕಾರ್ಯಕ್ರಮ ನಿರೂಪಿಸಿದರು. ಶೈಲಜಾ ಜಯರಾಜ್, ಅರುಣಾ ಪ್ರಮೋದ್ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ತಿರುವಾದಿರ, ನೃತ್ಯ, ಹಾಡು ಸಾಂಸ್ಕೃತಿಕ ಸಂಭ್ರಮ ನಡೆಯಿತು.ಓಣಂ ಸದ್ಯ ಏರ್ಪಡಿಸಲಾಯಿತು.










