ಬನಾರಿ:ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮಾಜಿ ಅಧ್ಯಕ್ಷ ಸಮಾಜ ಸೇವಕ ಹಾಗೂ ಕಲಾ ಸಂಘಟಕ ದಿ.ವನಮಾಲ ಕೇಶವ ಭಟ್ಟರ ಸಂಸ್ಮರಣಾ ಕಾರ್ಯಕ್ರಮ ಹಾಗು ಕೀ.ವ.ಕೇಶವ ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭ ಬನಾರಿಯ ಕೀರಿಕ್ಕಾಡು ಮಾಸ್ಟರ್ ವಿಷ್ಣು ಭಟ್ ಸ್ಮಾರಕ ಸಭಾಭವನದಲ್ಲಿ ನಡೆಯಿತು.ಹಿರಿಯ ಅರ್ಥಧಾರಿ ಹಾಗು ಸಂಘಟಕ ರಾಮ ಜೋಯಿಸ ಬೆಳ್ಳಾರೆ ಅವರಿಗೆ
ಕೀ.ವ.ಕೇಶವ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಖ್ಯಾತ ಅರ್ಥಧಾರಿ ವೆಂಕಟರಾಮ ಭಟ್ಟ ಸುಳ್ಯ ಅಭಿನಂದನಾ ಭಾಷಣ ಮಾಡಿದರು.ಖ್ಯಾತ ಯಕ್ಷಗಾನ ಕಲಾವಿದ ಗಣೇಶ ಶರ್ಮ ಸಿದ್ದಕಟ್ಟೆ ಸಂಸ್ಮರಣಾ ಭಾಷಣ ಮಾಡಿದರು.ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು.ರಾಮಣ್ಣ ಮಾಸ್ಟರ್ ದೇಲಂಪಾಡಿ ಸ್ವಾಗತಿಸಿದರು.ಈಶ್ವರಿ ಪೃಥ್ವಿ ಪ್ರಾರ್ಥನೆ ಮಾಡಿದರು. ಹವ್ಯಾಸಿ ಪತ್ರಕರ್ತ ಚಂದ್ರಶೇಖರ ಏತಡ್ಕ ವಂದಿಸಿದರು. ಕಾರ್ಯಕ್ರಮದ ಮೊದಲಿಗೆ

ಸ್ಥಳ ಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ದೇವರಿಗೆ ಪೂಜೆ ನೆರವೇರಿತು.ಸಂಜನಾ ರೆಂಜಾಳ ಅವರ ಭಾಗವತಿಕೆಯ ರಂಗಪ್ರವೇಶವು ಗಣೇಶ ಸ್ತುತಿಯೊಂದಿಗೆ ದೇವರ ಮುಂದೆ ನೆರವೇರಿತು. ಗೀತಾ ಪಾರಾಯಣವನ್ನು ಸ್ಥಳೀಯ ತಂಡದವರು ನಡೆಸಿಕೊಟ್ಟರು. ಬಳಿಕ ಯಕ್ಷಗುರು ವಿಶ್ವವಿನೋದ ಬನಾರಿ ಅವರ ಮಾರ್ಗದರ್ಶನದಲ್ಲಿ ಕೃಷ್ಣಾರ್ಜುನ ತಾಳಮದ್ದಳೆ ಜರಗಿತು.ಭಾಗವತರಾಗಿ
ನರಸಿಂಹ ಶಾಸ್ತ್ರಿ ಪುತ್ತೂರು, ಚೆಂಡೆ ಮದ್ದಳೆ ಚಕ್ರತಾಳದಲ್ಲಿ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ, ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ವಿಷ್ಣು ಶರಣ ಬನಾರಿ,ನಾರಾಯಣ ಪಾಟಾಳಿ ಮಯ್ಯಾಳ,ಕೃಷ್ಣ ಪ್ರಸಾದ ಬೆಳ್ಳಿಪ್ಪಾಡಿ, ಸದಾನಂದ ಮಯ್ಯಾಳ ಕಾಣಿಸಿಕೊಂಡರು.ಅರ್ಥದಾರಿಗಳಾಗಿ ವೆಂಕಟರಾಮ ಭಟ್ಟ ಸುಳ್ಯ, ರಾಮಾಜೋಯಿಸ ಬೆಳ್ಳಾರೆ,ಗಣೇಶ ಶರ್ಮ ಸಿದ್ದಕಟ್ಟೆ,ರಾಮಣ್ಣ ಮಾಸ್ಟರ್ ದೇಲಂಪಾಡಿ, ಸದಾಶಿವ ರೈ ಬೆಳ್ಳಿಪ್ಪಾಡಿ, ವೆಂಕಟೇಶ ಕುಮಾರ ಉಳುವಾನ, ರಾಮನಾಯ್ಕ ದೇಲಂಪಾಡಿ, ಪದ್ಮನಾಭರಾವ್ ಮಯ್ಯಾಳ, ಬಿ.ಯಚ್ ವೆಂಕಪ್ಪಗೌಡ ಭಾಗವಹಿಸಿದರು.
ಸಿ .ಎ.ಗಣೇಶಭಟ್ಟ ಸುಳ್ಯ, ಕುಮಾರಸ್ವಾಮಿ ತೆಕ್ಕುಂಜೆ, ಶಾಂತಾ ಚೆಂಡೆಮೂಲೆ ಮತ್ತಿತರರು ಉಪಸ್ಥಿತರಿದ್ದರು. ನಂದಕಿಶೋರ ಬನಾರಿ ವಂದಿಸಿದರು.










