ಅಹಮದಾಬಾದ್: ಅತಿಥೇಯ ಗುಜರಾತ್ ಟೈಟನ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 39 ರನ್ಗಳಿಂದ ಮಣಿಸಿ ಜಯದ ಹಾದಿಗೆ ಮರಳಿದೆ. ಮೊದಲು ಬ್ಯಾಟ್ ಮಾಡಿದ ಟೈಟನ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 224 ರನ್ಗಳ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಸನ್ ರೈಸರ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಏಕಾಂಗಿ ಹೋರಾಟ ನಡೆಸಿದ
ಅಭಿಷೇಕ್ ಶರ್ಮ 41 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿ ನೆರವಿನಿಂದ 74 ರನ್ ಬಾರಿಸಿದರು. ಅಭಿಷೇಕ್ ಔಟಾದ ಬಳಿಕ ಎಸ್ಆರ್ಎಚ್ ಕುಸಿತ ಕಂಡಿತು. ಗುಜರಾತ್ ಪರ ಮಹಮ್ಮದ್ ಸಿರಾಜ್, ಪ್ರಸಿದ್ಧಕೃಷ್ಣ ತಲಾ 2 ವಿಕೆಟ್ ಪಡೆದರು. ಮೊದಲು ಬ್ಯಾಟಿಂಗ್ ಮಾಡಿದ ಟೈಟನ್ಸ್ಗೆ ಎಡಗೈ ಬ್ಯಾಟರ್ ಸಾಯ್ ಸುದರ್ಶನ್ ಮತ್ತು
ನಾಯಕ ಶುಭ್ಮನ್ ಗಿಲ್ ಉತ್ತಮ ಆರಂಭ ನೀಡಿದರು. ಬಳಿಕ ಬಂದ ಅನುಭವಿ ಜೋಸ್ ಬಟ್ಲರ್, ತಂಡದ ಮೊತ್ತ ದ್ವಿಶತಕದ ಗಡಿ ದಾಟುವಂತೆ ನೋಡಿಕೊಂಡರು. ಕೇವಲ 23 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ 48 ರನ್ ಗಳಿಸಿದ ಸುದರ್ಶನ್, ತಂಡದ ಮೊತ್ತ 6.5 ಓವರ್ಗಳಲ್ಲೇ 87 ರನ್ ಆಗಿದ್ದಾಗ ಔಟಾದರು. ನಂತರ ಗಿಲ್ ಮತ್ತು ಬಟ್ಲರ್ ಗುಡುಗಿದರು.ಗಿಲ್ 38 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ನೆರವಿನಿಂದ 76 ರನ್ ಬಾರಿಸಿದರೆ, ಬಟ್ಲರ್ 37 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ನೆರವಿನಿಂದ 64 ರನ್ ಚಚ್ಚಿದರು.ವಾಷಿಂಗ್ಟನ್ ಸುಂದರ್ (21 ರನ್), ರಾಹುಲ್ ತೆವಾಟಿಯಾ (6 ರನ್) ಹಾಗೂ ರಶೀದ್ ಖಾನ್ (0) ಕೊನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದ್ದರಿಂದ ಇನ್ನಷ್ಟು ರನ್ ಗಳಿಸುವ ಅವಕಾಶ ಕೈ ತಪ್ಪಿತು. ಅಂತಿವಾಗಿ ಆತಿಥೇಯ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 224 ರನ್ ಗಳಿಸಿತು.
ರೈಸರ್ಸ್ ಪರ ಜಯದೇವ್ ಉನದ್ಕಟ್ ಮೂರು ವಿಕೆಟ್ ಪಡೆದರೆ, ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಜೀಷನ್ ಅನ್ಸಾರಿ ಒಂದೊಂದ ವಿಕೆಟ್ ಕಿತ್ತರು. ಈ ಗೆಲುವು ಅಗ್ರ ನಾಲ್ಕರಲ್ಲಿ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖವಾಗಿತ್ತು.