ಶ್ರೀಹರಿಕೋಟಾ:ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ.ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ 2ನೇ ಲಾಂಚ್ ಪ್ಯಾಡ್ನಿಂದ, 51.7 ಮೀಟರ್ ಎತ್ತರದ ರಾಕೆಟ್ ಅನ್ನು ಶುಕ್ರವಾರ ನಸುಕಿನ 2.55ಕ್ಕೆ ಉಡಾವಣೆ ಮಾಡಲಾಗಿದೆ.ಇದನ್ನು
‘ಜಿಎಸ್ಎಲ್ವಿ–ಎಫ್17/ಇಒಎಸ್–05 ಮಿಷನ್’ ಎಂದು ಹೆಸರಿಸಲಾಗಿದೆ.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಐತಿಹಾಸಿಕ ಸಾಧನೆ ಇದಾಗಿದ್ದು ಭೂಸ್ಥಿರ ಕಕ್ಷೆಯಿಂದ ಚಿತ್ರಗಳನ್ನು ಸೆರೆಹಿಡಿಯುವ ಈ ಇಒಎಸ್–05 ಮಿಷನ್ ಅತ್ಯಾಧುನಿಕ ತಂತ್ರಜ್ಞಾನದ ಭೂ ವೀಕ್ಷಣಾ ಉಪಗ್ರಹವಾಗಿದ್ದು, ಜಿಯೋಸಿಂಕ್ರೋನಸ್ ಕಕ್ಷೆಯಿಂದ ಭೂಮಿಯ ಚಿತ್ರಣಗಳನ್ನು ಸೆರೆಹಿಡಿಯಲಿರುವ ಭಾರತದ ಪ್ರಥಮ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ನಿಗದಿತ ಸಮಯಕ್ಕೆ ಯಶಸ್ವಿಯಾಗಿ ರಾಕೆಟ್ ಆಕಾಶಕ್ಕೆ ಚಿಮ್ಮಿತು. ಜಿಎಸ್ಎಲ್ವಿ ರಾಕೆಟ್ ಮೂಲಕ ನಡೆಸಲಾಗುತ್ತಿರುವ 19ನೇ ಉಡಾವಣೆ ಇದಾಗಿದೆ.










