ಸುಳ್ಯ:ಸುಳ್ಯ ಕಸಬಾ ಗ್ರಾಮದ ಬೂಡು – ಕೇರ್ಪಳ – ಕುರುಂಜಿಗುಡ್ಡೆ ವ್ಯಾಪ್ತಿಯನ್ನೊಳಗೊಂಡ ಶ್ರೀ ಭಗವತೀ ಯುವ ಸೇವಾ ಸಂಘದ ಆಶ್ರಯದಲ್ಲಿ 21 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಸೆ.4ರಂದು ಬಂಟರ ಭವನದ ವಠಾರದಲ್ಲಿ ನಡೆಯಿತು.ಸುಳ್ಯ ಬಂಟರ ಸಂಘದ
ಅಧ್ಯಕ್ಷ ಸುಭಾಶ್ಚಂದ್ರ ರೈ ತೋಟ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.ಭಗವತೀ ಯುವ ಸೇವಾ ಸಂಘದ ಗೌರವಾಧ್ಯಕ್ಷ ಬೂಡು ರಾಧಾಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕಿ ಮೀನಾಕ್ಷಿ, ಎಸ್.ಬಿ.ಐ. ನಿವೃತ್ತ ಮುಖ್ಯ ವ್ಯವಸ್ಥಾಪಕರಾದ ಜನಾರ್ದನ ನಾಯ್ಕ್ ಕೇರ್ಪಳ, ಸುಳ್ಯ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಶಿವಪ್ರಸಾದ್ ಕೇರ್ಪಳ ಮುಖ್ಯ ಅತಿಥಿಗಳಾಗಿದ್ದರು.
ಭಗವತೀ ಯುವ ಸೇವಾ ಸಂಘದ ಅಧ್ಯಕ್ಷ ಸುನಿಲ್ ಕೇರ್ಪಳ ಪದಾಧಿಕಾರಿಗಳು ಹಾಗೂ ಊರವರಿದ್ದರು.
ಸಂಘದ ಮಾಜಿ ಅಧ್ಯಕ್ಷ ವಾಸುದೇವ ಅಂಗಡಿಮಠ ಸ್ವಾಗತಿಸಿದರು. ಕುಸುಮಾಧರ ಶೆಟ್ಟಿ ಬೂಡು ಕಾರ್ಯಕ್ರಮ ನಿರೂಪಿಸಿದರು.ಬಳಿಕ ಶ್ರೀಕೃಷ್ಣ ವೇಷ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆಯಿತು.










